ಹೊಸಪೇಟೆ (ವಿಜಯನಗರ): ವಿಜಯನಗರ ಕ್ಷೇತ್ರದ 35 ವಾರ್ಡ್ಗಳಲ್ಲಿ ಗುರುವಾರ ಮಹಿಳಾ ಕಾಂಗ್ರೆಸ್ ಸಮಿತಿ ರಚಿಸಲಾಯಿತು.

‘ತಳಮಟ್ಟದಿಂದ ಪಕ್ಷ ಸಂಘಟನೆಯ ಉದ್ದೇಶದಿಂದ ವಾರ್ಡ್ವಾರು ಮಹಿಳಾ ಸಮಿತಿ ರಚಿಸಿ, ಜವಾಬ್ದಾರಿ ವಹಿಸಲಾಗಿದೆ. ಎಲ್ಲರೂ ಪಕ್ಷ ಸಂಘಟನೆಗೆ ಶ್ರಮಿಸಬೇಕು. ದೇಶಕ್ಕೆ ಕಾಂಗ್ರೆಸ್ ಕೊಟ್ಟ ಕೊಡುಗೆ ಜನರಿಗೆ ತಿಳಿಸಬೇಕು’ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೊಹಮ್ಮದ್ ಇಮಾಮ್ ನಿಯಾಜಿ ತಿಳಿಸಿದರು.

‘ಕಾಂಗ್ರೆಸ್ 60 ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ಬಿಜೆಪಿ ಏಳು ವರ್ಷಗಳಲ್ಲಿ ಹಾಳುಗೆಡವಿದೆ. ಬಂಡವಾಳಷಾಹಿಗಳಿಗೆ ದೇಶ ಮಾರಾಟ ಮಾಡುತ್ತಿದೆ. ಆಹಾರ ಧಾನ್ಯ, ತೈಲ ದರ ಗಗನಕ್ಕೆ ಏರಿರುವುದರಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ’ ಎಂದು ಟೀಕಿಸಿದರು.

ಮುಖಂಡರಾದ ರಾಮನಗೌಡ, ತೇಜಾ ನಾಯ್ಕ, ಮುನ್ನಿ ಕಾಸಿಂ, ಗಂಗಮ್ಮ, ಇಂದುಮತಿ, ಪಲ್ಲವಿ, ಕೆ.ಮಂಜುಳಾ, ರಂಗಮ್ಮ, ನನ್ನಿಬಿ, ಯಮುನಮ್ಮ, ಲಕ್ಷ್ಮಿದೇವಿ, ನಿರ್ಮಲಾ, ಮಂಗಳಾಬಾಯಿ, ಜಾವೇದ್ ನಾಗರಾಜ್, ಸರಸ್ವತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.