ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರಾ ನೀರು ಉಳಿತಾಯಕ್ಕೆ ಆಗ್ರಹ

Last Updated 7 ಫೆಬ್ರುವರಿ 2022, 13:03 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಏಪ್ರಿಲ್ ಕೊನೆಯವರೆಗೂ ರೈತರ ಗದ್ದೆಗಳಿಗೆ ನೀರು ಬೇಕಿರುವುದರಿಂದ ತುಂಗಭದ್ರಾ ಜಲಾಶಯದಲ್ಲಿ ನೀರು ಉಳಿತಾಯ ಮಾಡಬೇಕೆಂದು ತುಂಗಭದ್ರಾ ರೈತ ಸಂಘ ಆಗ್ರಹಿಸಿದೆ.

ಈ ಸಂಬಂಧ ಸಂಘದ ಪದಾಧಿಕಾರಿಗಳು ಸೋಮವಾರ ಜಲಾಶಯದ ಯೋಜನಾ ವೃತ್ತದ ಸೂಪರಿಟೆಂಡೆಂಟ್‌ ಎಂಜಿನಿಯರ್‌ ಎಲ್‌. ಬಸವರಾಜ್‌ ಅವರಿಗೆ ಮನವಿ ಪತ್ರ ಸಲ್ಲಿಸಿ ಹಕ್ಕೊತ್ತಾಯ ಮಾಡಿದರು.

ನೀರಾವರಿ ಸಲಹಾ ಸಮಿತಿ ಸಭೆ ನಡೆದಾಗ ಜಲಾಶಯದಲ್ಲಿ 97 ಟಿಎಂಸಿ ಅಡಿ ನೀರಿತ್ತು. ಕೆಲವೇ ದಿನಗಳಲ್ಲಿ 64 ಟಿಎಂಸಿಗೆ ಬಂದಿದೆ. ಕಾಲುವೆ, ನದಿ ಮೂಲಕ ಹೆಚ್ಚುವರಿ ನೀರು ಹರಿಸಲಾಗುತ್ತಿದೆ. ರೈತರು ನಾಟಿ ಮಾಡಿದ ಭತ್ತ, ಇತರೆ ಬೆಳೆಗಳು ತಡವಾಗಿ ಬರುತ್ತವೆ. ಏಪ್ರಿಲ್‌ ಕೊನೆಯವರೆಗೂ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ರೈತರಿಗೆ ನೀರು ಬೇಕಾಗುತ್ತದೆ. ನೀರಿನ ಉಳಿತಾಯ ಮಾಡಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಜಿ. ಪುರುಷೋತ್ತಮಗೌಡ, ಮುಖಂಡರಾದ ಶೇಕ್ಷಾವಲಿ ಸಾಬ್, ಸಿ.ಬಸವರಾಜ್ ಎಚ್.ವೀರಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT