ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಸಮಾಜದಿಂದ ₹900 ಮೊತ್ತದ190 ಆಹಾರ ಧಾನ್ಯ ಕಿಟ್‌ ವಿತರಣೆ

Last Updated 10 ಜೂನ್ 2021, 15:00 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವೀರಶೈವ ಲಿಂಗಾಯತ ಸಮಾಜದಿಂದ ಗುರುವಾರ ನಗರದ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಸಮಾಜದ ದುರ್ಬಲ ವರ್ಗದ 190 ಜನರಿಗೆ ₹900 ಮೊತ್ತದ ಆಹಾರ ಧಾನ್ಯ ಒಳಗೊಂಡ ಕಿಟ್‌ ವಿತರಿಸಲಾಯಿತು.

5 ಕೆ.ಜಿ ಅಕ್ಕಿ, 3 ಕೆ.ಜಿ ಜೋಳ, 3 ಕೆ.ಜಿ ಗೋಧಿ, 1 ಕೆ.ಜಿ ತೊಗರಿ ಬೇಳೆ, 1 ಕೆ.ಜಿ ಸಕ್ಕರೆ, 1 ಕೆ.ಜಿ ಅವಲಕ್ಕಿ, 1 ಕೆ.ಜಿ ರವೆ, 1 ಲೀಟರ್ ಅಡುಗೆ ಎಣ್ಣೆ, ಚಹಾ ಪೌಡರ್, ಸಾಸಿವೆ, ಜೀರಿಗೆ ಒಳಗೊಂಡ 190 ಕಿಟ್‌ಗಳನ್ನು ಸಮಾಜದ ಅಧ್ಯಕ್ಷ ಶರಣು ಸ್ವಾಮಿ, ಕಾರ್ಯದರ್ಶಿ ರವಿಶಂಕರ್‌ ವಿತರಿಸಿದರು.

ಆಟೊ ಚಾಲಕರು, ಅಡುಗೆ, ಎಲೆಕ್ಟ್ರಿಶಿಯನ್‌, ನಿರ್ಮಾಣ ಕಾರ್ಯ ಮಾಡುವವರಿಗೆ ಕಿಟ್‌ಗಳನ್ನು ವಿತರಿಸಲಾಯಿತು. ಶುಕ್ರವಾರ ನಗರದಲ್ಲಿನ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರು, ಸಿಬ್ಬಂದಿ, ಕೆಳಹಂತದ ಕೆಲಸದವರಿಗೆ ಆಹಾರದ ಕಿಟ್‌ ವಿತರಿಸಲಾಗುತ್ತದೆ.

ಕೊಟ್ಟೂರು ಸ್ವಾಮಿ ಕಲ್ಯಾಣ ಕೇಂದ್ರದ ಕಾರ್ಯದರ್ಶಿ ಸಾಲಿ ಸಿದ್ದಯ್ಯ ಸ್ವಾಮಿ, ಲಿಂಗಾಯತ ಸಮಾಜದ ಮುಖಂಡರಾದ ಅಶ್ವಿನ್ ಕೋತಂಬ್ರಿ, ಭಾವಿಕಟ್ಟಿ ಮುರಳಿ, ಮೆಟ್ರಿ ಮಲ್ಲಿಕಾರ್ಜುನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT