ಹೊಸಪೇಟೆ (ವಿಜಯನಗರ): ‘ನಮ್ಮ ಪೂರ್ವಜರ ಇತಿಹಾಸ, ಸಂಸ್ಕೃತಿ, ಸಂಪ್ರದಾಯದ ಮಾಹಿತಿ ಕೊಡುವ ಗೈಡ್‌ಗಳು ನಮ್ಮ ಸಾಂಸ್ಕೃತಿಕ ರಾಯಭಾರಿಗಳು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎನ್. ಚಿನ್ನಸ್ವಾಮಿ ಸೋಸಲೆ ತಿಳಿಸಿದರು.
ತಾಲ್ಲೂಕಿನ ಕಮಲಾಪುರದಲ್ಲಿ ಗುರುವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಪ್ರವಾಸಿ ಮಾರ್ಗದರ್ಶಕರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಚರಿತ್ರೆಯನ್ನು ನಿಖರವಾಗಿ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ತಿಳಿಸುವುದು ಮಹತ್ವದ ಕೆಲಸ. ಅದರಲ್ಲೂ ನಮ್ಮ ನಾಡಿನ ಶ್ರೀಮಂತ ಪರಂಪರೆಯನ್ನು ದೇಶ–ವಿದೇಶದ ಜನರಿಗೆ ತಿಳಿಸುವ ಕೆಲಸ ಅತ್ಯಂತ ಶ್ರೇಷ್ಠವಾದುದು’ ಎಂದು ಹೇಳಿದರು.
ಸಮಾಜ ಸೇವಕ ಪಂತರ್ ಜಯಂತ್ ಉದ್ಘಾಟಿಸಿದರು. ಪ್ರಾಧ್ಯಾಪಕ ಚಂದ್ರಶೇಖರ್ ಶಾಸ್ತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರ ಆಪ್ತ ಸಹಾಯಕ ಗೋವಿಂದ ಕುಲಕರ್ಣಿ, ಈಶ್ವರ್ ಸಿಂಗ್, ಸೈಯದ್ ಫಯಾಜ್ ಅಹಮ್ಮದ್, ಶಿವಪ್ರಕಾಶ್, ಪ್ರಸನ್ನಕುಮಾರ್, ಸಿಐಟಿಯು ಸಂತೋಷ್ ಕುಮಾರ್, ರಾಘವೇಂದ್ರ ಇದ್ದರು. ಸಮಾವೇಶದಲ್ಲಿ ಬೆಂಗಳೂರು, ಮೈಸೂರು, ಬೇಲೂರು, ಹಳೇಬೀಡು, ಹಾಸನ, ಚಿತ್ರದುರ್ಗ, ಬಾದಾಮಿ, ವಿಜಯಪುರದ ಗೈಡ್‌ಗಳು ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.