ಪ್ರಜಾವಾಣಿ ವರದಿ ಫಲಶ್ರುತಿಯುವಜನ ಇಲಾಖೆ ಜಿಮ್ ಆರಂಭ

ಹೊಸಪೇಟೆ (ವಿಜಯನಗರ): ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ಸೇರಿದ ಇಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿನ ಜಿಮ್ ಬುಧವಾರ ಆರಂಭಗೊಂಡಿದೆ.
‘ಯುವಜನ ಕ್ರೀಡಾ ಇಲಾಖೆಯ ಜಿಮ್, ಈಜುಕೊಳದಲ್ಲಿಲ್ಲ ಸಿದ್ಧತೆ’ ಶೀರ್ಷಿಕೆ ಅಡಿ ಸೋಮವಾರ (ಜು.5) ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ವರದಿಗೆ ಎಚ್ಚೆತ್ತ ಇಲಾಖೆ ಬುಧವಾರ ಜಿಮ್ ಆರಂಭಿಸಿದ್ದು, ಮೊದಲ ದಿನವೇ ಅನೇಕರು ಬಂದು ದೈಹಿಕ ಕಸರತ್ತು ಮಾಡಿದ್ದಾರೆ.
‘ಬ್ಯಾಡ್ಮಿಂಟನ್ ಕೋಟ್, ಈಜುಕೊಳದಲ್ಲಿ ಸಣ್ಣಪುಟ್ಟ ದುರಸ್ತಿ ಕಾರ್ಯ ನಡೆಯುತ್ತಿದ್ದು, ಅದು ಪೂರ್ಣಗೊಂಡ ನಂತರ ಆರಂಭಿಸಲಾಗುವುದು’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.