ಶನಿವಾರ, ಮೇ 8, 2021
25 °C

ಹೂವಿನಹಡಗಲಿ: ಹೋಳಿ ಸಂಭ್ರಮದ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೂವಿನಹಡಗಲಿ: ಕೋವಿಡ್ ಭೀತಿಯ ನಡುವೆಯೂ ತಾಲ್ಲೂಕಿನಾದ್ಯಂತ ಸೋಮವಾರ ಹೋಳಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಪ್ರತಿವರ್ಷದಂತೆ ಸಾಮೂಹಿಕ ಆಚರಣೆ, ಅಬ್ಬರ, ಉತ್ಸಾಹ ಎಲ್ಲಿಯೂ ಕಾಣಿಸಲಿಲ್ಲ.

ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮಕ್ಕಳು, ಯುವಕರು ತಂಡ ತಂಡವಾಗಿ ಹಲಗೆ ಬಾರಿಸುತ್ತಾ ಹೋಳಿಯ ಸಂಭ್ರಮ ಆಚರಿಸಿದರು. ಬೀದಿಗಳಲ್ಲಿ ಹಲಗೆಯ ನಾದಕ್ಕೆ ಹೆಜ್ಜೆ ಹಾಕುತ್ತಾ ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಮಹಿಳೆಯರು, ಯುವತಿಯರು ಕೂಡ ವಿಧ ವಿಧದ ಬಣ್ಣದಲ್ಲಿ ಮಿಂದ್ದೆದು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದರು.

ಹೋಳಿ ಆಚರಣೆ ಹಿನ್ನೆಲೆಯಲ್ಲಿ ಪಟ್ಟಣದ ಮುಖ್ಯರಸ್ತೆಯ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಹೋಳಿ ಹುಣ್ಣಿಮೆ ಪ್ರಯುಕ್ತ ಬೆಳಗಿನ ಜಾವ ಕಾಮನಕಟ್ಟೆಯ ಬಳಿ ಸಾಂಪ್ರದಾಯಿಕವಾಗಿ ಕಾಮ ದಹನ ನಡೆಸಲಾಯಿತು.

ಹೊಳಲಿನಲ್ಲಿ ಹೋಳಿ ಸಂಭ್ರಮ: ಹೊಳಲು ಗ್ರಾಮದಲ್ಲಿ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ವಿಶ್ವ ಹಿಂದೂ ಪರಿಷತ್, ಭಜರಂಗ ದಳ , ಕರವೇ ಕಾರ್ಯಕರ್ತರು ಸಾಮೂಹಿಕ ಹೋಳಿ ಆಚರಣೆ ನಡೆಸಿದರು. ಮುಖ್ಯ ಬೀದಿಯಲ್ಲಿ ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕುತ್ತ ಯುವಕರು ಸಂಭ್ರಮಿಸಿದರು. ಬಹುತೇಕ ಸಾರ್ವಜನಿಕರು ಸಾಮೂಹಿಕ ಹೋಳಿ ಆಚರಣೆಯಲ್ಲಿ ಪಾಲ್ಗೊಳ್ಳದೇ ಕುಟುಂಬ ಹಾಗೂ ಓಣಿಗೆ ಸೀಮಿತಗೊಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು