ಶನಿವಾರ, ಏಪ್ರಿಲ್ 17, 2021
31 °C

ಹೊಸ ಸಾಮರ್ಥ್ಯ ರೂಢಿಸಿಕೊಳ್ಳಿ ನೂತನ ಮಹಿಳಾ ಕಾನ್ ಸ್ಟೆಬಲ್ ಗಳಿಗೆ ಐಜಿಪಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ದಿನದಿನವೂ‌ ಬದಲಾಗುವ ಕಾನೂನು‌ ಸುವ್ಯವಸ್ಥೆಯ ಸನ್ನಿವೇಶಗಳು ಹಾಗೂ ಹೊಸ ಕಾನೂನುಗಳ ಅರಿವು ಪೊಲೀಸರಿಗೆ ‌ಅತ್ಯಗತ್ಯ ಎಂದು ಐಜಿಪಿ ಎಂ.ನಂಜುಂಡಸ್ವಾಮಿ ಹೇಳಿದರು‌.

ನಗರದ‌ ಡಿಎಆರ್ ಮೈದಾನದಲ್ಲಿ ಶುಕ್ರವಾರ ೧೨ನೇ ನಾಗರಿಕ ಮಹಿಳಾ ಪೊಲೀಸ್ ಕಾನ್ ಸ್ಟೆಬಲ್ ಗಳ ತಂಡದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವೇ‌ ದಿನಗಳಲ್ಲಿ‌ ಕೆಲಸ ಆರಂಭಿಸಲಿರುವ ಕಾನ್ ಸ್ಟೇಬಲ್ ಗಳು ಇಂಥದ್ಧೇ ಕೆಲಸ ಮಾತ್ರ ಮಾಡುವ ಮನಸ್ಥಿತಿಯಿಂದ ಹೊರ‌ಬರಬೇಕು ಎಂದರು
 
ಡ್ರೈವರ್ ಗಳಾಗಿ, ಗೂಢಾಚಾರಿಕೆ ಕೆಲಸ ಮಾಡಿ, ವಿಶ್ವಸಂಸ್ಥೆಯಲ್ಲಿ‌ ಕೆಲಸ ಮಾಡುವಂಥ ಸಾಮರ್ಥ್ಯವನ್ನು ರೂಢಿಸಿಕೊಳ್ಳಿ. ಕಾನ್ಸ್ ಟೆಬಲ್ ಹುದ್ದೆ ಮಹತ್ವದ ಹುದ್ದೆ ಎಂಬುದನ್ನು ಮರೆಯಬೇಡಿ ಎಂದರು.

ಜೀವನಪೂರ್ತಿ ಕಂಪ್ಯೂಟರ್ ಕೆಲಸ, ಸಂಚಾರ ನಿಯಂತ್ರಣ ಕೆಲಸ ಮಾಡುತ್ತಲೇ ಇರಬೇಡಿ. ವಿಮಾನ ನಿಲ್ದಾಣ ಭದ್ರತೆ, ಅಂತರರಾಷ್ಟ್ರೀಯ ಅಪರಾಧ ಮೊದಲಾದ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು ಎಂದರು.

ಪೊಲೀಸ್‌ ಸಿಬ್ಬಂದಿ ಸಮವಸ್ತ್ರದಲ್ಲಿ‌ ಸಂಚರಿಸುವುದು ಬಹಳ ಮುಖ್ಯ. ಸಾರ್ವಜನಿಕ ಸ್ಥಳಗಳಲ್ಲಿ ಅಪರಾಧಗಳ ನಿಯಂತ್ರಣ ಕ್ಕೆ ಸಮವಸ್ತ್ರ ದೊಡ್ಡ ಪ್ರಭಾವ ಬೀರುತ್ತದೆ. ‌ಹೀಗಾಗಿ ಹೆಚ್ಚು ಹೊತ್ತು ‌ಸಮವಸ್ತ್ರದಲ್ಲಿರಲು ಪ್ರಯತ್ನಿಸಿ ಎಂದರು.

ಕರ್ತವ್ಯ ನಿರ್ಲಕ್ಷ್ಯದ ಕಾರಣಕ್ಕೆ, ವಿಚಾರಣೆ ನಡೆಸದೇ ಕೆಲಸದಿಂದ ವಜಾಗೊಳಿಸುವ ಅವಕಾಶ
ಇಂಡಿಯನ್ ಪೊಲೀಸ್ ಕಾಯ್ದೆಯಲ್ಲಿದೆ. ಅದನ್ನು ಮರೆಯಬಾರದು ಎಂದರು.

ಪೊಲೀಸರದು ಸಂವಿಧಾನ ನಿಷ್ಠ ಕೆಲಸ. ಕಾನೂನು ಮತ್ತು ಆದೇಶಗಳನ್ನು ಜಾರಿಗೊಳಿಸುವ ಕೆಲಸ. ಎಲ್ಲರನ್ನೂ ಗೌರವದಿಂದ ಕಾಣಬೇಕು.‌ಸಾರ್ವಜನಿಕರ ಕೆಲಸ ಮಾಡಲು ವಿಳಂಬ ‌ಸಲ್ಲದು ಎಂದರು.

ಜನರ ಜೊತೆ ಸೇರಿ ಕೆಲಸ ಮಾಡುವುದರಲ್ಲಿ ಖುಷಿಪಟ್ಟರೆ ಮಾತ್ರ ಪೊಲೀಸರ ‌ಕೆಲಸ ಉತ್ತಮವಾಗುತ್ತದೆ. ಠಾಣೆಗೆ ತೆರಳಲಿರುವ ಮಹಿಳಾ ಪೊಲೀಸ್ ಕಾನ್ ಸ್ಟೆಬಲ್ ಗಳು ದಿನವೂ ಕಲಿಯುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕು ಎಂದು 
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ‌ನಿಂಬರಗಿ ಸಲಹೆ ನೀಡಿದರು.

ತಾಳ್ಮೆ , ಶಿಸದತು ಕಳೆದುಕೊಂಡರೆ ಪೊಲೀಸರು‌ ತಮ್ಮ ಹುದ್ದೆಯಲ್ಲಿ ‌ಇರಲು‌ ಅನರ್ಹರಾಗುತ್ತಾರೆ ಎಂಬುದನ್ನು ಮರೆಯಬಾರದು ಎಂದರು.

ಸಂವಿಧಾನಗಳ ಆಶಯಗಳ ‌ರಕ್ಷಣೆ, ರಾಷ್ಟ್ರದ ‌ಭದ್ರತೆ‌ ಮೊದಲ ಆದ್ಯತೆ ಆಗಿರಲಿ. ವೈಯಕ್ತಿಕ ವಿಚಾರಗಳಿಗೆ ಕೊನೆಯ ಆದ್ಯತೆ‌ ಕೊಡಬೇಕು ಎಂದರು.

ತಂಡದ ‌ಸರ್ವೋತ್ಕೃಷ್ಟ ಪ್ರಶಿಕ್ಷಣಾರ್ಥಿಯಾಗಿ ವಿಜಯಲಕ್ಷ್ಮಿ ಹೊರಹೊಮ್ಮಿದರು.

ಅಂತಿಮ ಒಳಾಂಗಣ ಪರೀಕ್ಷೆಯಲ್ಲಿ
ನೇತ್ರಾವತಿ ಬಿ.ಎ‌ನ್. ಪ್ರಥಮ, 
ಸರಸ್ವತಿ ತೇಲಿ ದ್ವಿತೀಯ‌ಹಾಗೂ
ಅರ್ಚನಾ ಎಂ.ವಿ ತೃತೀಯ ‌ಬಹುಮಾನ‌ ಗಳಿಸಿದರು‌

ಅಂತಿಮ ಹೊರಾಂಗಣ ಪರೀಕ್ಷೆಯಲ್ಲಿ
ರೇಖಾ‌ ಜಿದ್ದಿಮನಿ - ಪ್ರಥಮ, 
ವಿಜಯಲಕ್ಷ್ಮಿ  ದ್ವಿತೀಯ ಹಾಗೂ
ಭೀಮವ್ಬ ಕಲವಾಡ ತೃತೀಯ ‌ಬಹುಮಾನ ಗಳಿಸಿದರು.

 ಫೈರಿಂಗ್ ಸ್ಪರ್ಧೆಯಲ್ಲಿ
ರೇಖಾ ಜಿದ್ದಿಮನಿ- ಪ್ರಥಮ, ಲಕ್ಷ್ಮಿ- ದ್ವಿತೀಯ, ಆರ್.ಚೇತನಾ- ತೃತೀಯ ಬಹುಮಾನ ಗಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ನಿತೀಶ್ 
ತರಬೇತಿ ಶಾಲೆಯ ಪ್ರಾಂಶುಪಾಲರಾದ ಬಿ.ಎನ್.ಲಾವಣ್ಯ, ಪ್ರೊಬೆಷನರಿ ಐಪಿಎಸ್ ಅಧಿಕಾರಿ ಈಶ್ವರ್ ಕುಮಾರ್ ತಾಂಡು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು