ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ’ ವರದಿ ಫಲಶ್ರುತಿ: ಕಾಮಗಾರಿಗೆ ಜೆಸಿಬಿ ಬದಲು ಕಾರ್ಮಿಕರ ಬಳಕೆ

Last Updated 8 ನವೆಂಬರ್ 2020, 10:30 IST
ಅಕ್ಷರ ಗಾತ್ರ

ಹೊಸಪೇಟೆ: ಹಂಪಿ ಕೋರ್‌ ವಲಯದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಜೆಸಿಬಿ ಬದಲು ಕಾರ್ಮಿಕರನ್ನು ಬಳಸಿಕೊಂಡು ಕಾಮಗಾರಿ ಮುಂದುವರೆಸಲಾಗಿದೆ.

'ಆಗ ಕೊಳವೆಬಾವಿ, ಈಗ ಪೈಪ್‌ಲೈನ್‌' ಶೀರ್ಷಿಕೆ ಅಡಿ ನ. 7ರಂದು (ಶನಿವಾರ) ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

ವರದಿಗೆ ಎಚ್ಚೆತ್ತುಕೊಂಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ತೋಟಗಾರಿಕೆ ವಿಭಾಗವು ಈಗ ಯಂತ್ರೋಪಕರಣಗಳ ಬದಲು ಕಾರ್ಮಿಕರ ಮೂಲಕ ಕಾಮಗಾರಿ ನಡೆಸುತ್ತಿದೆ.

ಕುಡಿಯುವ ನೀರಿನ ಸಮಸ್ಯೆ ನೀಗಿಸುವುದು ಹಾಗೂ ಉದ್ಯಾನ ನಿರ್ವಹಣೆಗಾಗಿ ಹಂಪಿಯ ಕೋರ್‌ ಜೋನ್‌ ವ್ಯಾಪ್ತಿಗೆ ಬರುವ ಚಂದ್ರಶೇಖರ ದೇವಸ್ಥಾನ ಸಮೀಪ ಕೊಳವೆಬಾವಿ ಕೊರೈಸಲಾಗಿದೆ. ಈಗ ಅಲ್ಲಿಂದ ಹಂಪಿಯ ಪರಿಸರದೊಳಕ್ಕೆ ಪೈಪ್‌ಲೈನ್‌ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅದಕ್ಕಾಗಿ ಜೆಸಿಬಿ ಬಳಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT