ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಪೌರಾಣಿಕ ನಾಟಕ ಪ್ರದರ್ಶನ ಹೆಚ್ಚಾಗಲಿ’

ರಾಮಕೃಷ್ಣ ಕನ್ನರ್ಪಾಡಿಯವರಿಗೆ ರಂಗತೋರಣ ಪುರಸ್ಕಾರ
Last Updated 2 ಫೆಬ್ರುವರಿ 2020, 10:37 IST
ಅಕ್ಷರ ಗಾತ್ರ

ಬಳ್ಳಾರಿ: ‘ಪೌರಾಣಿಕ ನಾಟಕಗಳು ಎಲ್ಲೆಡೆ ಹೆಚ್ಚು ಪ್ರದರ್ಶನಗೊಳ್ಳಬೇಕು’ ಎಂದು ಕವಿ ಸಿದ್ದಲಿಂಗಯ್ಯ ಪ್ರತಿಪಾದಿಸಿದರು.

ನಗರದಲ್ಲಿ ಶನಿವಾರ ರಾತ್ರಿ ರಂಗತೋರಣ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಪ್ರಸಾಧನ ಕಲಾವಿದ ರಾಮಕೃಷ್ಣ ಕನ್ನರ್ಪಾಡಿಯವರಿಗೆ ಸಾಂಸ್ಕೃತಿಕ ಸಾರ್ವಭೌಮ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರ ನೀಡಿ ಮಾತನಾಡಿದ ಅವರು, ‘ಮಹಾಭಾರತ, ರಾಮಾಯಣ, ಪುರಾಣ ಕಥೆಗಳನ್ನು ಜನ ಓದಿ ತಿಳಿದುಕೊಳ್ಳುವುದಿಲ್ಲ. ಆದರೆ ನಾಟಕಗಳು ಪುರಾಣ ಕಾವ್ಯಗಳ ಕುರಿತು ಅರಿವು ಮೂಡಿಸುತ್ತವೆ’ ಎಂದರು.

ರಾಮಕೃಷ್ಣ ಕನ್ನರ್ಪಾಡಿ ಮಾತನಾಡಿ, ‘ಜೋಳದರಾಶಿ ದೊಡ್ಡನಗೌಡ ಅವರ ಸಾಧನೆ ಅಮೋಘ ಅವರ ಹೆಸರಿನಲ್ಲಿ ಪುರಸ್ಕಾರ ಪಡೆದಿರುವುದು ನನ್ನ ಪಾಲಿನ ಸೌಭಾಗ್ಯ’ ಎಂದರು.

‘ಗಮಕ ಕ್ಷೇತ್ರದಲ್ಲಿ ಛಾಪು ಮೂಡಿಸಿದ ದೊಡ್ಡನಗೌಡರ ಹೆಸರಲ್ಲಿ ಗಮಕ ಸಾಧಕರಿಗೆ ಪುರಸ್ಕಾರ ನೀಡಿದರೆ ಹೆಚ್ಚು ಸಾರ್ಥಕವಾಗುತ್ತದೆ. ಪುರಸ್ಕಾರದ ಋಣವನ್ನು ಮತ್ತಷ್ಟು ಕೆಲಸ ಮಾಡುವ ಮೂಲಕ ತೀರಿಸುವೆ’ ಎಂದು ಹೇಳಿದರು.

ರಂಗತೋರಣ ಅಧ್ಯಕ್ಷ ಆರ್.ಭೀಮಸೇನ, ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಗೌರವಾಧ್ಯಕ್ಷ ಬಿ.ಸಿದ್ದನಗೌಡ, ಧಾರವಾಡ ಬೇಂದ್ರೆ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಹಿರೇಮಠ, ರಾಮೇಶ ಟ್ರಸ್ಟ್ ಅಧ್ಯಕ್ಷ ಕೆ.ಪಂಪನಗೌಡ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕಪ್ಪಗಲ್ ಪ್ರಭುದೇವ, ಸುಭದ್ರಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT