ಬುಧವಾರ, ಮಾರ್ಚ್ 3, 2021
31 °C

ಕೊಟ್ಟೂರು ಪಟ್ಟಣ ಪಂಚಾಯ್ತಿ: ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೊಟ್ಟೂರು(ಕೂಡ್ಲಿಗಿ): ಸ್ಥಳೀಯ ಪಟ್ಟಣ ಪಂಚಾಯ್ತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನ ಗಳಿಸಿದರೂ, ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಸ್ಥಿತಿ ಉಂಟಾಗಿದೆ.

ಕಾಂಗ್ರೆಸ್ ಪಕ್ಷೇತರ ಬೆಂಬಲದಿಂದ ಅಧಿಕಾರ ಹಿಡಿಯಲು ಪ್ರಯತ್ನ ನಡೆಸಬಹುದು ಎಂಬ ಚರ್ಚೆ ಆರಂಭವಾಗಿದೆ.

ಮತಗಳ ಎಣಿಕ ಕಾರ್ಯ ಸೋಮವಾರ ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಯಿತು. ಚುನಾವಣೆಗೆ ಇವಿಎಂ ಯಂತ್ರಗಳನ್ನು ಬಳಸಿದ್ದರಿಂದ ಎಣಿಕೆ ಕೇವಲ ಎರಡು ಗಂಟೆಗಳಲ್ಲಿ ಮುಗಿಯಿತು. ಪ್ರತಿ ವಾರ್ಡಿನ ಎಣಿಕೆ ಕೆಲವೇ ನಿಮಿಷಗಳಲ್ಲಿ ಮುಗಿದು ಫಲಿತಾಂಶ ಘೋಷಣೆಯಾಗುತ್ತಿದ್ದಂತೆ, ಎಣಿಕೆ ಕೇಂದ್ರದ ಹೊರಗಡೆ ನಿಂತಿದ್ದ ಬೆಂಬಲಿಗರ ಹರ್ಷ ಮುಗಿಲು ಮುಟ್ಟುತ್ತಿತ್ತು.

4ನೇ ವಾರ್ಡಿ ಕಾಂಗ್ರೆಸ್‌ ಅಭ್ಯರ್ಥಿ ತೋಟದ ರಾಮಪ್ಪ ಅತಿ ಹೆಚ್ಚು 496 ಮತಗಳ ಅಂತರದಿಂದ ಗೆಲವು ಸಾಧಿಸಿದ್ದರೆ, ಅವರ ಎದುರಾಳಿ ಬಿಜೆಪಿಯ ಕೆ. ಗುರುಬಸವರಾಜ 469 ಮತ ಪಡೆದರು. 16ನೇ ವಾರ್ಡಿನ ಕಾಂಗ್ರೆಸ್‌ ಅಭ್ಯರ್ಥಿ ಭಾರತಿ ಪಾಟೀಲ್ 21 ಮತಗಳ ಅಂತರದಿಂದ ಗೆಲವು ಪಡೆದರು.

ಎರಡನೇ ಬಾರಿ ಆಯ್ಕೆ

12ನೇ ವಾರ್ಡಿನ ಬಾವಿಕಟ್ಟೆ ಶಿವಾನಂದ ಹಾಗೂ 11ನೇ ವಾರ್ಡಿನ ಕೆ. ಸಾವಿತ್ರಮ್ಮ ಎರಡನೇ ಬಾರಿ ಆಯ್ಕೆಯಾಗಿದ್ದಾರೆ.

‘ಒಟ್ಟು 121 ನೋಟಾ ಮತಗಳನ್ನು ಚಲಾವಣೆಯಾಗಿದ್ದು, ಒಂದು ಅಂಚೆ ಮತ ಬಂದಿದೆ’ ಎಂದು ತಹಶೀಲ್ದಾರ ಕೆ. ಮಂಜುನಾಥ ತಿಳಿಸಿದರು.

ಕೂಡ್ಲಿಗಿ ಡಿವೈಎಸ್ಪಿ ಬಸವೇಶ್ವರ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಹೊಸಪೇಟೆ ಉಪವಿಭಾಗಾಧಿಕಾರಿ ಪಿ.ಎನ್‌,ಲೋಕೇಶ್, ಚುನಾವಣಾಧಿಕಾರಿಗಳಾದ ಸುಧೀರ್,ಎನ್.ವಿ. ಪ್ರಕಾಶ್, ಸಹಾಯಕ ಚುನಾವಣಾಧಿಕಾರಿಗಳಾದ ನಾಗನಗೌಡ, ಮಂಜುನಾಥ ಗೊಂದಿ, ಉಪತಹಶೀಲ್ದಾರ ಮಂಜುನಾಥ ಎಣಿಕೆಯ ಉಸ್ತುವಾರಿ ವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು