‘ಜಗ ಬದುಕಲು ಶ್ರಮಿಸಿದ ಕೃಷ್ಣ’

7

‘ಜಗ ಬದುಕಲು ಶ್ರಮಿಸಿದ ಕೃಷ್ಣ’

Published:
Updated:
Deccan Herald

ಹೊಸಪೇಟೆ: ಕೃಷ್ಣ ಜನ್ಮಾಷ್ಟಮಿಯನ್ನು ಭಾನುವಾರ ನಗರದಲ್ಲಿ ತಾಲ್ಲೂಕು ಆಡಳಿತ ಹಾಗೂ ನಗರಸಭೆಯಿಂದ ಆಚರಿಸಲಾಯಿತು.

ಕಮಲಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ದಯಾನಂದ ಕಿನ್ನಾಳ ಉಪನ್ಯಾಸ ನೀಡಿ, ‘ಕೃಷ್ಣ ಸೌಂದರ್ಯವಂತ, ಶ್ರೀಮಂತ, ತ್ಯಾಗಿ, ಎಲ್ಲರ ಕಲ್ಯಾಣ ಬಯಸುವವ. ಈ ಕಾರಣಕ್ಕಾಗಿಯೇ ಆತನನ್ನು ದೇವೋತ್ತಮ, ಸರ್ವೋತ್ತಮ ಹಾಗೂ ಪುರುಷೋತ್ತಮನೆಂದು ಕರೆಯಲಾಗುತ್ತದೆ’ ಎಂದರು.

‘ಜಗತ್ತಿನಲ್ಲಿ ಕೆಲವರಲ್ಲಿ ಶ್ರೀಮಂತಿಕೆ ಇದೆ. ಕೆಲವರು ಸುಂದರವಾಗಿದ್ದಾರೆ. ಕೆಲವರು ದಕ್ಷ ಆಡಳಿತಗಾರರಿದ್ದಾರೆ. ಆದರೆ, ಕೃಷ್ಣನಂತೆ ಎಲ್ಲ ಗುಣಗಳು ಯಾರಲ್ಲೂ ಇಲ್ಲ. ಐದು ಸಾವಿರ ವರ್ಷಗಳ ಹಿಂದೆ ಇದೇ ಭೂಮಿ ಮೇಲೆ ನರ ಮಾನವನಾಗಿ ಜನ್ಮ ತಾಳಿದ್ದ ಕೃಷ್ಣ ಜನ ಬದುಕಲು, ಜಗ ಬದುಕಲು ಕೆಲಸ ಮಾಡಿದ್ದ. ಅಂದಿನಿಂದ ಇಂದಿನವರೆಗೆ ಅದೃಶ್ಯವಾಗಿ ನಮ್ಮ ಮಧ್ಯೆಯೇ ಆತ ಕೆಲಸ ಮಾಡುತ್ತಿದ್ದಾನೆ’ ಎಂದು ಹೇಳಿದರು.

ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ನಗರಸಭೆ ಪೌರಾಯುಕ್ತ ವಿ. ರಮೇಶ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ. ವೆಂಕೋಬಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌.ಡಿ. ಜೋಶಿ, ಯಾದವ ಸಮಾಜದ ಗೌರವ ಅಧ್ಯಕ್ಷ ವೆಂಕೊಬಪ್ಪ, ಯಾದವ ಸಂಘದ ತಾಲ್ಲೂಕು ಅಧ್ಯಕ್ಷ ಸೋಮಣ್ಣ, ಉಪಾಧ್ಯಕ್ಷ ಸಣ್ಣ ಈರಪ್ಪ ಯಾದವ ಉಪಸ್ಥಿತರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !