ಶನಿವಾರ, ಅಕ್ಟೋಬರ್ 16, 2021
29 °C

ವಿಜಯನಗರ | ಬಿಸಿಲಲ್ಲಿ ಕುಗ್ಗದ ಉತ್ಸಾಹ; ಮಳಿಗೆಗೆ ಭಾರಿ ಸಂಖ್ಯೆ ಜನ

ಅಭಿಷೇಕ್‌ ಸಿ. Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ನೂತನ ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭದ ಪ್ರಯುಕ್ತ ವೇದಿಕೆಯ ಬಳಿ ನಿರ್ಮಿಸಲಾಗಿರುವ ವಿವಿಧ ಇಲಾಖೆಯ ಮಳಿಗೆಗಳಿಗೆ ಸಾರ್ವಜನಿಕರು ಬಿರಿ ಬಿಸಿಲಲ್ಲೂ ಉತ್ಸಾಹದಿಂದ ಭೇಟಿ ನೀಡಿದರು.

ಶನಿವಾರ ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ಜಿಲ್ಲಾಧಿಕಾರಿ ಅನಿರುದ್ಧ್ ಪಿ.ಶ್ರವಣ್ ಅವರು ಮಳಿಗೆಗಳನ್ನು ಉದ್ಘಾಟಿಸಿದರು. ಬಳಿಕ ಎಲ್ಲಾ ಮಳಿಗೆಗಳಿಗೆ ಭೇಟಿ ನೀಡಿದರು. ಜಿಲ್ಲಾ ಕ್ರೀಡಾಂಗಣದ ವಿದ್ಯಾರಣ್ಯ ವೇದಿಕೆಯ ಆವರಣದಲ್ಲೇ 55ಕ್ಕೂ ಹೆಚ್ಚು ವಿವಿಧ ಇಲಾಖೆಯ ಯೋಜನೆಗಳ ಪ್ರದರ್ಶನ ಮತ್ತು ವಾಣಿಜ್ಯ ಮಳಿಗೆಗಳನ್ನು ತೆರೆಯಲಾಗಿದೆ.

ಬೆಳಿಗ್ಗೆಯಿಂದಲೇ ಕ್ರೀಡಾಂಗಣಕ್ಕೆ ಲಗ್ಗೆ ಇಟ್ಟ ಜನ ಬಿರಿ ಬಿಸಿಲಲ್ಲೂ ಮಳಿಗೆಗಳನ್ನು ವೀಕ್ಷಿಸಿ ಅಲ್ಲಿರುವ ವಸ್ತುಗಳನ್ನು ಖರೀದಿಸಿದರು. ಮಾಲಿನ್ಯ ನಿಯಂತ್ರಣ ಮಂಡಳಿ, ತೋಟಗಾರಿಕೆ, ಪಶುಪಾಲನೆ, ಪ್ರವಾಸೋದ್ಯಮ, ಆಯುಷ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕರಕುಶಲ ಅಭಿವೃದ್ಧಿ, ಅರಣ್ಯ ಇಲಾಖೆಯ ಸೇರಿದಂತೆ ಇತರೆ ಇಲಾಖೆಗಳ ಮಳಿಗೆಗಳನ್ನು ಸ್ಥಾಪಿಸಲಾಗಿದೆ.

ಕುರಿ ಉಣ್ಣೆಯಿಂದ ಉತ್ಪಾದಿಸಿದ ಉತ್ಪನ್ನಗಳು, ಇಳಕಲ್‌ ಸೀರೆಗಳು, ಪುಸ್ತಕಗಳು ಮತ್ತು ಚನ್ನಪಟ್ಟಣದ ಗೊಂಬೆಗಳ ಮಳಿಗೆಗಳು ಜನರನ್ನು ಆಕರ್ಷಿಸಿತು. ಅರಣ್ಯ ಇಲಾಖೆಯ ಮಳಿಗೆಗಳಲ್ಲಿ ಕೃತಕವಾದ ಕರಡಿ, ಚಿರತೆ ಎಲ್ಲರ ಗಮನ ಸೆಳೆಯಿತು. ಅನೇಕರ ಅವುಗಳ ಎದುರು ನಿಂತು ಸೆಲ್ಫಿ ತೆಗೆದುಕೊಂಡರು.

‌‌‌ಕೋವಿಡ್ ಲಸಿಕಾಕರಣ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿ ಆರೋಗ್ಯ ಯೋಜನೆಗಳ ಮಾಹಿತಿ ನೀಡುವುದರ ಜೊತೆಗೆ ಕೋವಿಡ್ ಲಸಿಕಾಕರಣ ಮಾಡಿದರು. ಲಸಿಕೆ ಪಡೆಯದವರು ಆಧಾರ್‌ ಮಾಹಿತಿ ದಾಖಲಿಸಿ, ಲಸಿಕೆ ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು