ಗುರುವಾರ , ನವೆಂಬರ್ 14, 2019
22 °C

ಹಂಪಿ ಪ್ರವಾಸಿಗರಿಗೆ ಸೌಕರ್ಯ

Published:
Updated:
Prajavani

ಹೊಸಪೇಟೆ: ತಾಲ್ಲೂಕಿನ ಹಂಪಿಯಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಸೂಚಿಸಿರುವ ಹಿನ್ನೆಲೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸೂಪರಿಟೆಂಡೆಂಟ್‌ ಪಿ. ಕಾಳಿಮುತ್ತು, ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮೋತಿಲಾಲ್‌ ಲಮಾಣಿ, ಅಧಿಕಾರಿಗಳಾದ ಸೋಮ್ಲ ನಾಯ್ಕ, ಮಂಜು ನಾಯ್ಕ, ವಿರೂಪಾಕ್ಷೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್‌. ಪ್ರಕಾಶ ರಾವ್‌ ಅವರು, ದೇಗುಲದ ಆವರಣ, ವಾಹನ ನಿಲುಗಡೆ ಜಾಗವನ್ನು ಪರಿಶೀಲಿಸಿದರು.

‘ವ್ಯವಸ್ಥಿತವಾದ ಕೌಂಟರ್‌, ವಾಹನ ನಿಲುಗಡೆಗೆ ನಿರ್ದಿಷ್ಟವಾದ ಜಾಗ, ಆಟೊ ನಿಲ್ದಾಣ, ಬುಕ್‌ ಸ್ಟಾಲ್‌ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಲು ಸ್ಥಳ ಪರಿಶೀಲನೆ ನಡೆಸಲಾಗಿದೆ’ ಎಂದು ಪ್ರಕಾಶ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)