ಮಂಗಳವಾರ, ಜನವರಿ 18, 2022
15 °C

ಪ್ರಜಾವಾಣಿ ಸಾಧಕರು; ಲೈಂಗಿಕ ಕಾರ್ಯರ್ತೆಯರ ‘ಆಸರೆ’ ಲಕ್ಷ್ಮಿನರಸಮ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ಬಳ್ಳಾರಿ ಮೋತಿ ಸರ್ಕಲ್ ಬಳಿಯಿರುವ ಸೌಖ್ಯ ಬೆಳಕು ಸಮುದಾಯ ಸೇವಾ ಸಂಸ್ಥೆಯ ಜಿಲ್ಲಾ ವ್ಯವಸ್ಥಾಪಕರಾದ ಲಕ್ಷ್ಮಿನರಸಮ್ಮ ಅವರು ಲೈಂಗಿಕ ಕಾರ್ಯಕರ್ತೆಯರಿಗೆ, ಮಂಗಳಮುಖಿಯರಿಗೆ ಮತ್ತು ಸಂಕಷ್ಟದಲ್ಲಿ ಇರುವವರಿಗೆ 15 ವರ್ಷಗಳಿಂದ ಬೇರೆ ಬೇರೆ ಸ್ವರೂಪದಲ್ಲಿ ನೆರವಾಗುತ್ತಿದ್ದಾರೆ. ಅವರಲ್ಲಿ ಆತ್ಮವಿಶ್ವಾಸ ತುಂಬುವುದರ ಜೊತೆಗೆ ಉದ್ಯೋಗಾವಕಾಶಕ್ಕೆ ಮಾರ್ಗದರ್ಶನ ತೋರುತ್ತಿದ್ದಾರೆ.

ಲೈಂಗಿಕ ಕಾರ್ಯರ್ತೆಯರು ಅನಾರೋಗ್ಯಕ್ಕೀಡಾಗುವ ಸಾಧ್ಯತೆ ಹೆಚ್ಚಿರುತ್ತದೆ ಮತ್ತು ಸುರಕ್ಷಿತ ಬದುಕು ಕಂಡುಕೊಳ್ಳಲು ಕೆಲ ಬಾರಿ ಸೂಕ್ತ ಮಾರ್ಗದರ್ಶನ ಸಿಗುವುದಿಲ್ಲ. ಅಂಥವರು ಖಿನ್ನತೆಗೆ ಒಳಗಾಗಬಾರದು ಮತ್ತು ಪ್ರಾಣಕ್ಕೆ ಅಪಾಯ ಮಾಡಿಕೊಳ್ಳಬಾರದು ಎಂಬ ಉದ್ದೇಶದಿಂದ ಲಕ್ಷ್ಮಿನರಸಮ್ಮ ಅವರು ತಮ್ಮ ಸಂಸ್ಥೆಯ ಮುಖಾಂತರ ನೆರವಾಗುತ್ತಿದ್ದಾರೆ.

‘ಲೈಂಗಿಕ ಕಾರ್ಯಕರ್ತೆಯರು ಹೇಗೆ ಸುರಕ್ಷಿತವಾಗಿ ಆರೋಗ್ಯವನ್ನು ಕಾಯ್ದು
ಕೊಳ್ಳಬೇಕು ಮತ್ತು ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ನೀಡುತ್ತೇನೆ. ಆಗಾಗ್ಗೆ ಅವರ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡುತ್ತೇನೆ. ಸರ್ಕಾರದಿಂದ ಸಿಗುವ ಸೌಲಭ್ಯ ಅವರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಲಕ್ಷ್ಮಿನರಸಮ್ಮ ಹೇಳುತ್ತಾರೆ.

ಒಂದೂವರೆ ದಶಕದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಸಂಸ್ಥೆಯ ಪ್ರಯೋಜನ ಪಡೆದಿದ್ದಾರೆ. ಸ್ವಯಂ–ಉದ್ಯೋಗದ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.