ಅತ್ಯಾಚಾರ: ಗರ್ಭವತಿಯಾದ ಬಾಲಕಿ, ಆರೋಪಿ ಪರಾರಿ

ಮಂಗಳವಾರ, ಏಪ್ರಿಲ್ 23, 2019
31 °C

ಅತ್ಯಾಚಾರ: ಗರ್ಭವತಿಯಾದ ಬಾಲಕಿ, ಆರೋಪಿ ಪರಾರಿ

Published:
Updated:

ಹೊಸಪೇಟೆ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವುದಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ನಾಗೇನಹಳ್ಳಿಯ ದೇವರಗುಡಿ ಚಂದ್ರಶೇಖರಪ್ಪ (55) ವಿರುದ್ಧ ಮಂಗಳವಾರ ತಡರಾತ್ರಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘2018ರ ನವೆಂಬರ್‌ನಿಂದ ಸತತ ಮೂರು ತಿಂಗಳು ಬಾಲಕಿ ಮೇಲೆ ಚಂದ್ರಶೇಖರಪ್ಪ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಬಾಲಕಿಗೆ ಮುಟ್ಟು ಆಗುವುದು ನಿಂತಿದೆ. ಪೋಷಕರು ವೈದ್ಯರ ಬಳಿ ಹೋಗಿ ಪರೀಕ್ಷೆ ನಡೆಸಿದಾಗ ಬಾಲಕಿ ಗರ್ಭೀಣಿಯಾಗಿರುವುದು ಗೊತ್ತಾಗಿದೆ.

ಈ ಕುರಿತು ಬಾಲಕಿಯ ತಾಯಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆದಿದೆ’ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 10

  Angry

Comments:

0 comments

Write the first review for this !