ಭಾನುವಾರ, ಸೆಪ್ಟೆಂಬರ್ 19, 2021
24 °C
ಪ್ರತಿದಿನ ನಾಲ್ಕು ಸಾವಿರ ಜನರಿಗೆ ಉಚಿತ ಊಟ, ನಿತ್ಯ ಮಧ್ಯಾಹ್ನ 12 ಗಂಟೆಗೆ ಕ್ಯಾಂಟೀನ್ ಆರಂಭ

ಬಳ್ಳಾರಿಯಲ್ಲಿ ‘ಸಂತೋಷ್‌ ಲಾಡ್‌ ಕ್ಯಾಂಟೀನ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಇಲ್ಲಿನ ತಾಲ್ಲೂಕು ಕಚೇರಿ ಹಾಗೂ ವಿಮ್ಸ್‌ ಬಳಿ ಬುಧವಾರದಿಂದ ಮಾಜಿ ಸಚಿವ ಸಂತೋಷ್‌ ಲಾಡ್‌ ನೂತನ ಕ್ಯಾಂಟೀನ್‌ಗೆ ಚಾಲನೆ ಸಿಕ್ಕಿದೆ.

ಪ್ರತಿದಿನ ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿರುವ ಕ್ಯಾಂಟೀನ್ ಮೂರು ಗಂಟೆವರೆಗೂ ತೆರೆದಿರುತ್ತದೆ. ನಿತ್ಯ ಯಾವುದಾದರೂ ಒಂದು ತರಹದ ತಿನಿಸು ಇರುತ್ತದೆ. ಎರಡೂ ಕಡೆಗಳಲ್ಲಿ ಸೇರಿ ದಿನಕ್ಕೆ ಸುಮಾರು ನಾಲ್ಕು ಸಾವಿರ ಮಂದಿಗೆ ಊಟದ ವ್ಯವಸ್ಥೆ ಇರುತ್ತದೆ ಎಂದು ಸಂತೋಷ್‌ ಲಾಡ್‌ ತಿಳಿಸಿದರು.

ಹಸಿವಿನಿಂದ ನರಳುವ ಬಡವರು, ಕೂಲಿಕಾರ್ಮಿಕರು ಹಾಗೂ ಹೊರಗಿನಿಂದ ಚಿಕಿತ್ಸೆಗೆ ಬರುವ ರೋಗಿಗಳ ಸಂಬಂಧಿಕರಿಗೆ ಊಟ ಅಗತ್ಯವಿರುವುದನ್ನು ಮನಗಂಡು ಕ್ಯಾಂಟೀನ್‌ ಆರಂಭಿಸಲಾಗುತ್ತಿದೆ. ಸದ್ಯಕ್ಕೆ ಮೂರು ತಿಂಗಳು ನಡೆಸಲಾಗುವುದು. ಅಗತ್ಯವಿದ್ದರೆ ಆನಂತರವೂ ಮುಂದುವರಿಸಲಾಗುವುದು ಎಂದು ಸಂತೋಷ್‌ ಲಾಡ್‌ ವಿವರಿಸಿದರು.

ಕಲಘಟಗಿ ಹಾಗೂ ಅಳ್ನಾವರದಲ್ಲಿ  ಹಿಂದೆಯೇ ಎರಡೆರಡು ಕ್ಯಾಂಟೀನ್‌ ತೆರೆಯಲಾಗಿದೆ. ಇತ್ತೀಚೆಗೆ ಹರಪನಹಳ್ಳಿ ಹಾಗೂ ಕೂಡ್ಲಿಗಿಯಲ್ಲೂ ಎರಡೆರಡು ಕ್ಯಾಂಟೀನ್ ಆರಂಭಿಸಲಾಗಿದೆ. ಈ ಹಿಂದೆ ತಾವು ಬಳ್ಳಾರಿ ಉಸ್ತುವಾರಿ ಸಚಿವರಾಗಿದ್ದರಿಂದ ಜಿಲ್ಲೆ ಮರೆಯಬಾರದೆಂಬ ಉದ್ದೇಶದಿಂದ ಕ್ಯಾಂಟೀನ್‌ ತೆರೆಯಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಬಳ್ಳಾರಿ ನಗರದ ಎರಡು ಕ್ಯಾಂಟೀನ್‌ಗಳು ಸೇರಿದರೆ ಒಟ್ಟು ಹತ್ತು ಕ್ಯಾಂಟೀನ್‌ಗಳನ್ನು ತೆರೆದಂತಾಗುತ್ತದೆ. ಇದಕ್ಕೆ ಎಷ್ಟು ಹಣ ಬೇಕಾಗಬಹುದೆಂದು ಲೆಕ್ಕಾಚಾರ ಹಾಕಿಲ್ಲ. ಸ್ವಂತ ಖರ್ಚಿನಿಂದಲೇ ನಡೆಸಲಾಗುವುದು ಎಂದೂ ಸಂತೋಷ್‌ ಲಾಡ್‌
ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು