ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯ ಬಿಡಿ, ಗ್ರಹಣ ನೋಡಿ: ಜಾಗೃತಿ ಕಾರ್ಯಾಗಾರ

26 ರಂದು ಕಂಕಣ ಸೂರ್ಯಗ್ರಹಣ
Last Updated 17 ಡಿಸೆಂಬರ್ 2019, 8:33 IST
ಅಕ್ಷರ ಗಾತ್ರ

ಬಳ್ಳಾರಿ: ಯಾವುದೇ ಭಯ, ಆತಂಕವಿಲ್ಲದೆ ಡಿ.26 ರಂದು ಕಂಕಣ ಸೂರ್ಯಗ್ರಹಣವನ್ನು ನೋಡಬಹುದುಎಂದು ಲೇಖಕ ಯರಿಸ್ವಾಮಿ ಹೇಳಿದರು.

ನಗರದ ಪ್ರಾದೇಶಿಕ ಉಪವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಗ್ರಹಣ ವೀಕ್ಷಣೆ ಕುರಿತು ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಅಪರೂಪಕ್ಕೆ ಘಟಿಸುವ ಗ್ರಹಣದಲ್ಲಿ ಸೂರ್ಯ ಬಂಗಾರದ‌ ಬಳೆಯಂತೆ ಗೋಚರಿಸುತ್ತದೆ. ಅದನ್ನು ಕನ್ನಡಕದ ‌ಮೂಲಕವೇ ನೋಡಬೇಕೆಂದೇನಿಲ್ಲ. ಕನ್ನಡಿ ಹಿಡಿದು ಕೂಡ ಗೋಡೆಯ ಮೇಲೆ ನೋಡಬಹುದು. ಗ್ರಹಣ ವೀಕ್ಷಣೆಗೆ ಬೇರೆ ಬೇರೆ ಮಾದರಿಗಳಿವೆ’ಎಂದರು.

‘ಗ್ರಹಣ ವೀಕ್ಷಣೆ ಭಾರತೀಯ ಸಮಾಜದಲ್ಲಿ ಹೆಚ್ಚು ಜನಪ್ರಿಯವಾಗದೇ ಇರಲು ಮೂಢ ನಂಬಿಕೆಗಳೇ ಕಾರಣ. ಅವುಗಳನ್ನು ಹೋಗಲಾಡಿಸುವ ಸಲಯವಾಗಿಯೇ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

‘ವಿಜ್ಞಾನ ನಗರವೆಂದೇ ಹೆಸರಾದ ಬೆಂಗಳೂರಿನಲ್ಲೂ ಗ್ರಹಣದ ದಿನ ಹೆಚ್ಚು ಜನ ಈಚೆ ಬರದಿರುವುದು ವಿಷಾದನೀಯ. ಎಲ್ಲ ನಗರ, ಪಟ್ಟಣ. ಹಳ್ಳಿಗಳಲ್ಲೂ ಗ್ರಹಣ ದ ಕುರಿತ ವೈಜ್ಞಾನಿಕ ತಿಳಿವಳಿಕೆ ಮೂಡಬೇಕಾಗಿದೆ’ಎಂದರು.

‘ಗ್ರಹಣ ನೋಡುವುದರಿಂದ ಯಾರಿಗೂ ಯಾವ ಕೇಡೂ ಆಗುವುದಿಲ್ಲ. ಹಾಗೇ ನೋಡದೇ ಇರುವುದರಿಂದ ಒಳಿತೂ ಆಗುವುದಿಲ್ಲ. ಗ್ರಹಣ ಖಗೋಳ ಲೋಕದ ವಿದ್ಯಮಾನವಷ್ಟೇ. ಅದನ್ನು ಕುತೂಹಲದಿಂದ ಹಿರಿಯರು ನೋಡಿದ್ದರಿಂದ, ಚಿಂತಿಸಿದ್ದರಿಂದ ಖಗೋಳ ವಿಜ್ಞಾನದ ಕುರಿತು ತಿಳಿವಳಿಕೆ ಮೂಡಿತು. ಸಂಶೋಧನೆಗಳು ನಡೆದವು’ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ನಡೆದ ಕಾರ್ಯಾಗಾರದಲ್ಲಿ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT