ಗುರುವಾರ , ಏಪ್ರಿಲ್ 2, 2020
19 °C

2019ರ ಕೊನೆಯ ಸೂರ್ಯ ಗ್ರಹಣ; 'ಬೆಂಕಿ ಉಂಗುರ'ದಂತೆ ಜ್ವಲಿಸಲಿರುವ ಸೂರ್ಯ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಸಂಪೂರ್ಣ ಸೂರ್ಯ ಗ್ರಹಣದ ಸಮಯದಲ್ಲಿ ಉಂಗುರ ಆಕಾರದಲ್ಲಿ ಕಾಣಿಸುವ ಸೂರ್ಯ– ಸಂಗ್ರಹ ಚಿತ್ರ

ಸೂರ್ಯ ಜ್ವಲಿಸುವ ಉಂಗುರವಾಗಿ ಗೋಚರಿಸುವ ಸಮಯ ಸಮೀಪಿಸುತ್ತಿದೆ. ಡಿಸೆಂಬರ್‌ 26ರಂದು ಖಗೋಳದಲ್ಲಿ ಮತ್ತೊಂದು ಸೌರ ವಿಸ್ಮಯ ನಡೆಯಲಿದ್ದು, ಭಾರತದಲ್ಲಿಯೂ ಭಾಗಶಃ ಸೂರ್ಯ ಗ್ರಹಣ ಗೋಚರಿಸಲಿದೆ.

ಗ್ರಹಣದ ಸಮಯದಲ್ಲಿ ಸೂರ್ಯ ಚಂದ್ರನ ಅಂಚಿನಲ್ಲಿ(ಭೂಮಿ ಮತ್ತು ಸೂರ್ಯನ ನಡುವೆ ಬರುವ ಚಂದ್ರನ ನೆರಳು ಭೂಮಿಯ ಮೇಲೆ ಬೀಳುತ್ತದೆ) ಉಂಗುರ ಆಕಾರದಲ್ಲಿ ಹೊಳೆಯುವುದರಿಂದ ಇದನ್ನು 'ರಿಂಗ್‌ ಆಫ್‌ ಫೈರ್‌'(ಬೆಂಕಿ ಉಂಗುರ) ಎಂದೇ ಕರೆಯಲಾಗುತ್ತದೆ. ಭಾರತದ ಎಲ್ಲ ಭಾಗಗಳಲ್ಲಿಯೂ ಸಂಪೂರ್ಣ ಗ್ರಹಣ ಗೋಚರಿಸುವುದಿಲ್ಲ. ಮದುರೈ, ಕೊಯಮತ್ತೂರು, ಚೆರವತ್ತೂರು ಹಾಗೂ ಕೋಯಿಕೋಡ್‌ನಲ್ಲಿ ಪೂರ್ಣ ಸೂರ್ಯ ಗ್ರಹಣ ಕಾಣಲು ಸಾಧ್ಯವಿದೆ. 

ಡಿಸೆಂಬರ್‌ 26ರ ಬೆಳಿಗ್ಗೆ 8:17ಕ್ಕೆ ಸೂರ್ಯ ಗ್ರಹಣ ಆರಂಭವಾಗಿ ಬೆಳಿಗ್ಗೆ 10:57ಕ್ಕೆ ಪೂರ್ಣಗೊಳ್ಳಲಿದೆ. ಬೆಳಿಗ್ಗೆ 9:31ಕ್ಕೆ ಗ್ರಹಣ ಪೂರ್ಣ ಪ್ರಮಾಣದಲ್ಲಿ ಗೋಚರಿಸಲಿದ್ದು, ಒಟ್ಟು 2 ಗಂಟೆ 40 ನಿಮಿಷ ಮತ್ತು 6 ಸೆಕೆಂಡ್‌ಗಳವರೆಗೂ ಗ್ರಹಣ ಸಂಭವಿಸುವುದಾಗಿ ಹಲವು ವೆಬ್‌ಸೈಟ್‌ಗಳು ವರದಿ ಮಾಡಿವೆ. 

ಸುಮಾರು ಎರಡೂವರೆ ಗಂಟೆ ಸಂಭವಿಸುವ ಸೂರ್ಯ ಗ್ರಹಣದಲ್ಲಿ ಸೂರ್ಯನನ್ನು ಚಂದ್ರ ಶೇ 91.93ರಷ್ಟು ಆವರಿಸಿಕೊಳ್ಳಲಿದ್ದಾನೆ. 2019ರ ಡಿಸೆಂಬರ್‌ 26ರಂದು ವರ್ಷದ ಕೊನೆಯ ಸೂರ್ಯ ಗ್ರಹಣ ಆಗಲಿದೆ. ಸೌದಿ ಅರೇಬಿಯಾ, ಕತಾರ್‌, ಓಮನ್‌, ಶ್ರೀಲಂಕಾ, ಮಲೇಷಿಯಾ, ಸಿಂಗಪೂರ್‌ ಸೇರಿದಂತೆ ಜಗತ್ತಿನ ಹಲವು ಭಾಗಗಳಲ್ಲಿ ಸೂರ್ಯ ಗ್ರಹಣ ಗೋಚರಿಸಲಿದೆ. 

172 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌(ಯುಎಇ)ನಲ್ಲಿ ಉಂಗುರಾಕಾರದಲ್ಲಿ ಸೂರ್ಯ ಗ್ರಹಣ ಗೋಚರಿಸುತ್ತಿದೆ ಎಂದು ದುಬೈ ಅಸ್ಟ್ರೋನಮಿ ಗ್ರೂಪ್‌ ಹೇಳಿದೆ. 1847ರಲ್ಲಿ ಕೊನೆಯದಾಗಿ ಈ ರೀತಿಯ ಸೂರ್ಯಗ್ರಹಣ ಯುಎಇಯಲ್ಲಿ ಗೋಚರಿಸಿತ್ತು. ಈಗ ಅಬು ಧಾಬಿಯ ಕೆಲವು ಭಾಗಗಳಲ್ಲಷ್ಟೇ ಸಂಪೂರ್ಣ ಸೂರ್ಯ ಗ್ರಹಣ ಕಾಣಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)