ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಕಲೆಗೆ ಆಧುನಿಕ ಮಾರುಕಟ್ಟೆ ಸ್ಪರ್ಶ ಸಿಗಲಿ: ಕುಲಪತಿ ಪ್ರೊ. ಸ.ಚಿ. ರಮೇಶ

ಕನ್ನಡ ವಿಶ್ವವಿದ್ಯಾಲಯದಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
Last Updated 25 ಡಿಸೆಂಬರ್ 2019, 10:23 IST
ಅಕ್ಷರ ಗಾತ್ರ

ಹೊಸಪೇಟೆ: ಕಲಾವಿದ ರಾಜು ಎಸ್‌. ಸುತಾರ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಕಲಾ ಗ್ಯಾಲರಿಯಲ್ಲಿ ಮಂಗಳವಾರ ನಡೆಯಿತು.

ಕುಲಪತಿ ಪ್ರೊ. ಸ.ಚಿ. ರಮೇಶ ಉದ್ಘಾಟಿಸಿ, ‘ಆಧುನಿಕ ಸಮಾಜ ವ್ಯಾಪಾರಿ ಮನೋಭಾವ ಹೊಂದಿದೆ. ಇಂತಹ ಸಂದರ್ಭದಲ್ಲಿ ಚಿತ್ರಕಲಾ ಪ್ರದರ್ಶನಕ್ಕೆ ಆಧುನಿಕ ಮಾರುಕಟ್ಟೆಯ ಸ್ಪರ್ಶ ನೀಡಬೇಕಾಗಿದೆ. ಹಾಗಾದರೆ ಕಲಾವಿದನ ಕಲೆಗೆ ಹೆಚ್ಚಿನ ಬೇಡಿಕೆ ಬರುತ್ತದೆ. ದೇಶಿ ಪರಂಪರೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಕೆಲಸವು ಕಲಾಕೃತಿಗಳು ಮಾಡುತ್ತವೆ’ ಎಂದರು.

‘ರಾಜು ಸುತಾರ ಅಪ್ಪಟ ಗ್ರಾಮೀಣ ಪ್ರತಿಭೆ. ಬಣ್ಣಗಳಲ್ಲಿ ತನ್ನ ಭಾವನೆಗಳನ್ನು ವ್ಯಕ್ತಪಡಿಸಿ ಅದ್ಭುತವಾದ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ’ ಎಂದು ತಿಳಿಸಿದರು.

ಕುಲಸಚಿವ ಎ. ಸುಬ್ಬಣ್ಣ ರೈ, ‘ಕಲಾಕೃತಿಗಳನ್ನು ಸಂಶೋಧನೆಗಳಿಗೆ ಪೂರಕವಾಗಿ ಹಾಗೂ ಲೇಖನಗಳ ಮೂಲಕ ಪ್ರಕಟಿಸಿದರೆ ಸಮಾಜದಲ್ಲಿ ಒಳ್ಳೆಯ ವೇದಿಕೆ ದೊರಕಿಸಿ ಕೊಟ್ಟಂತಾಗುತ್ತದೆ. ಇಂಥಹ ವೇದಿಕೆಗಳನ್ನು ಕನ್ನಡ ವಿಶ್ವವಿದ್ಯಾಲಯವು ಕಲ್ಪಿಸಿದೆ’ ಎಂದು ಹೇಳಿದರು.

ಲಲಿತಕಲಾ ನಿಕಾಯದ ಡೀನ್‌ ಕೆ.ರವೀಂದ್ರನಾಥ ಮಾತನಾಡಿ, ‘ದೃಶ್ಯಕಲೆ ಹೃದಯ ಸಂಬಂಧಿಯಾಗಿದೆ. ಚಿತ್ರಕಲೆಯ ಮೂಲ ಸೌಂದರ್ಯ ಮೀಮಾಂಸೆಯನ್ನು ಒಳಗೊಂಡಿದೆ. ಲಲಿತಕಲೆಗಳಾದ ಸಂಗೀತ ಮತ್ತು ದೃಶ್ಯಕಲೆಯು ಕಾವ್ಯಮೀಮಾಂಸೆಗೆ ಪ್ರೇರಣೆಯಾದ ಕಾವ್ಯಕ್ಕೆ, ಕವಿತೆಗೆ, ರಸಗ್ರಹಣದ ಮೂಲಕ ಕಲಾವಿದ ತನ್ನ ಕೈಕುಂಚದಲ್ಲಿ ತನ್ನ ಭಾವನೆಗಳನ್ನು ಕಲಾಕೃತಿಗಳ ಮೂಲಕ ವ್ಯಕ್ತಪಡಿಸುತ್ತಾನೆ’ ಎಂದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಿವಾನಂದ ಎಚ್. ಬಂಟನೂರ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯ ಜಯಾನಂದ ಮಾದರ, ದೃಶ್ಯಕಲಾ ವಿಭಾಗದ ಮುಖ್ಯಸ್ಥ ಮೋಹನ್‍ರಾವ್ ಬಿ. ಪಾಂಚಾಳ, ಉಪಕುಲಸಚಿವ ಎ.ವೆಂಕಟೇಶ, ಸಂಗೀತ ವಿಭಾಗದ ಮುಖ್ಯಸ್ಥ ಗೋವಿಂದ, ಪ್ರಾಧ್ಯಾಪಕ ಎಚ್.ಎನ್.ಕೃಷ್ಣೆಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT