ಅಪಘಾತ: ಗಾಯಾಳುಗಳನ್ನುಆಸ್ಪತ್ರೆಗೆ ದಾಖಲಿಸಿದ ತಹಶೀಲ್ದಾರ್
ಕಂಪ್ಲಿ: ತಾಲ್ಲೂಕಿನ ಮೆಟ್ರಿ ಗ್ರಾಮದ ಬಳಿಯ ಮಾರೆಮ್ಮ ದೇವಸ್ಥಾನದ ರಾಜ್ಯ ಹೆದ್ದಾರಿ-29ರಲ್ಲಿ ಸೋಮವಾರ ಸಂಭವಿಸಿದ ಎರಡು ಬೈಕ್ ಡಿಕ್ಕಿ ಅಪಘಾತದಲ್ಲಿ ಗಾಯಗೊಂಡ ಮಗು ಮತ್ತು ವ್ಯಕ್ತಿಯೊಬ್ಬರನ್ನು ತಹಶೀಲ್ದಾರ್ ತಮ್ಮ ವಾಹನದಲ್ಲಿ ಕರೆದುಕೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮರೆದಿದ್ದಾರೆ.
ಮೆಟ್ರಿಯಿಂದ ಕಂಪ್ಲಿಗೆ ತಹಶೀಲ್ದಾರ್ ಗೌಸಿಯಾಬೇಗಂ, ಗ್ರಾಮ ಲೆಕ್ಕಾಧಿಕಾರಿ ಜಿಲಾನ್ ಜೀಪ್‍ನಲ್ಲಿ ತೆರಳುತ್ತಿದ್ದಾಗ ಪ್ರಸ್ತುತ ಅಪಘಾತ ಸಂಭವಿಸಿದ್ದು, ರಕ್ತಸ್ರಾವದಿಂದ ನರಳುತ್ತಿದ್ದ 5 ವರ್ಷದ ಗಂಡು ಮಗು ಕಾರ್ತಿಕ್ ಮತ್ತು ಗಾಯಗೊಂಡ ಬೈಕ್ ಸವಾರ ಮಾರುತಿ (23) ಅರನ್ನು ತಕ್ಷಣ ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆಗೆ ನೆರವಾಗಿದ್ದಾರೆ.
ಗಾಯಾಳುಗಳು ಗಂಗಾವತಿ ತಾಲ್ಲೂಕಿನ ಡಣಾಪುರ ಗ್ರಾಮದವರಾಗಿದ್ದು, ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿ ನಗರಕ್ಕೆ ತೆರಳಿದರು ಎಂದು ಡಾ. ಮಲ್ಲೇಶಪ್ಪ ಮಾಹಿತಿ ನೀಡಿದರು. ಮತ್ತೊಂದು ಬೈಕ್‍ನ ಸವಾರರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.