ಶನಿವಾರ, ಮಾರ್ಚ್ 28, 2020
19 °C

ಪಂಚತಂತ್ರ ಸಿನಿಮಾ ಬಿಡುಗಡೆ ನಾಳೆ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಯೋಗರಾಜ ಭಟ್ ನಿರ್ದೇಶನದ ಪಂಚತಂತ್ರ‌ ಸಿನಿಮಾ ರಾಜ್ಯದ 180 ಚಿತ್ರಮಂದಿರಗಳಲ್ಲಿ ಶುಕ್ರವಾರ ಬಿಡುಗಡೆಯಾಗಲಿದೆ ಎಂದು ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ ಮತ್ತು ದಿವ್ಯಶ್ರೀ ತಿಳಿಸಿದರು. ಕಾಮಿಡಿ ಕಿಲಾಡಿಗಳು ಮತ್ತು ಯೋಗರಾಜಭಟ್ ನಡುವೆ ಅವಿನಾಭಾವ ಸಂಬಂಧವಿದೆ. ಅವರಿಂದ ನಮಗೆ ಹೆಚ್ಚಿನ ಖ್ಯಾತಿ ದೊರಕಿದೆ. ಹೀಗಾಗಿ‌ ನಮ್ಮ ತಂಡ ರಾಜ್ಯದಾದ್ಯಂತ ಸಂಚರಿಸಿ ಸಿನಿಮಾ ಪರ 'ಪ್ರಯಾಣ-ಪ್ರಚಾರ' ಶೀರ್ಷಿಕೆ ಅಡಿ ಪ್ರಚಾರ ನಡೆಸಿದ್ದೇವೆ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಯೋಗರಾಜ‌ಭಟ್ಟರಿಗೆ ಗುರುದಕ್ಷಿಣೆ ರೂಪದಲ್ಲಿ ಪಂಚತಂತ್ರ ಸಿನಿಮಾದ ಪರ ಪ್ರಚಾರ ಮಾಡುತ್ತಿದ್ದೇವೆ. ಹಿರಿಯ ಮತ್ತು ಕಿರಿಯ ತಲೆಮಾರಿನ ನಡುವಿನ ಸಂಘರ್ಷವೇ ಸಿನಿಮಾದ ತಿರುಳು ಎಂದು ದಿವ್ಯಶ್ರೀ ಹೇಳಿದರು. ತಂಡದ ಸೂರ್ಯ ಕುಂದಾಪುರ ಇದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)