ಗುರುವಾರ , ಆಗಸ್ಟ್ 18, 2022
25 °C

ಎರಡು ಬೈಕ್‌ಗಳೊಂದಿಗೆ ಯುವಕ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ₹85,000 ಬೆಲೆಬಾಳುವ ಎರಡು ಹಳೆಯ ಬೈಕ್‌ಗಳೊಂದಿಗೆ ಯುವಕನನ್ನು ಬಡಾವಣೆ ಠಾಣೆ ಪೊಲೀಸರು ಬುಧವಾರ ವಶಕ್ಕೆ ತೆಗೆದುಕೊಂಡಿದ್ದಾರೆ.

ಎಸ್‌.ಆರ್‌. ನಗರದ ಮಹಮ್ಮದ್‌ ಗೌಸ್‌ ಹುಸೇನ್‌ (19) ಬಂಧಿತ. ₹35,000 ಮೌಲ್ಯದ ಹೊಂಡಾ ಆ್ಯಕ್ಟಿವಾ ಮತ್ತು ₹50,000 ಬೆಲೆಬಾಳುವ ಹಿರೋ ಸ್ಪ್ಲೆಂಡರ್‌ ಪ್ರೋ ಬೈಕ್‌ ವಶಪಡಿಸಿಕೊಂಡಿದ್ದಾರೆ. ಗಾಂಧಿ ಕಾಲೊನಿಯ ಎಚ್‌.ಎಲ್‌.ಸಿ. ಸರ್ವೀಸ್‌ ರಸ್ತೆಯಿಂದ ಹಾದು ಹೋಗುವಾಗ ಗೌಸ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಡಾವಣೆ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಎಸ್‌.ಪಿ. ನಾಯ್ಕ, ಸಿಬ್ಬಂದಿ ಆರ್‌. ಶಿವಕುಮಾರ, ರಾಮಮೂರ್ತಿ, ಮಾಣಿಕ್‌ ರೆಡ್ಡಿ, ತಿಪ್ಪೇಸ್ವಾಮಿ, ಆನಂದಗೌಡ, ಸಂತೋಷ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು