ನಾಲ್ಕು ನಾಮಪತ್ರ ಸಲ್ಲಿಸಿದ ಮೈತ್ರಿ‌ ಅಭ್ಯರ್ಥಿ ವಿ.ಎಸ್.ಉಗ್ರಪ್ಪ‌

ಶುಕ್ರವಾರ, ಏಪ್ರಿಲ್ 19, 2019
27 °C
ದೇಶದ ನಾಯಕತ್ವ ಬದಲು: ಡಿಕೆಶಿ

ನಾಲ್ಕು ನಾಮಪತ್ರ ಸಲ್ಲಿಸಿದ ಮೈತ್ರಿ‌ ಅಭ್ಯರ್ಥಿ ವಿ.ಎಸ್.ಉಗ್ರಪ್ಪ‌

Published:
Updated:

ಬಳ್ಳಾರಿ: 'ಚುನಾವಣೆಯು‌ ದೇಶದ ಈಗಿನ ನಾಯಕತ್ವವನ್ನು‌ ಬದಲಿಸಲಿದೆ. ಬಳ್ಳಾರಿಯಲ್ಲಿ ಮತ್ತೆ ಮೈತ್ರಿ ಅಭ್ಯರ್ಥಿ ಉಗ್ರಪ್ಪ ಗೆಲುವು ಸಾಧಿಸಲಿದ್ದಾರೆ' ಎಂದು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದಲ್ಲಿ ಮಂಗಳವಾರ ಉಗ್ರಪ್ಪ ‌ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮತದಾನ ದೊಡ್ಡ ಅಸ್ತ್ರವಾಗಿದ್ದು, ಮತದಾರರು ಜಾಗೃತರಾಗಿ ಅಭಿವೃದ್ಧಿ ವಿಚಾರಗಳನ್ನು ಪರಿಗಣಿಸಿ ಮತದಾನ ಮಾಡಬೇಕು ಎಂದರು.

ಉಪಚುನಾವಣೆಯಲ್ಲಿ ಉಗ್ರಪ್ಪನವರಿಗೆ ಐದೂವರೆ ವರ್ಷಕ್ಕೆ ಮತ ಕೊಡಿ‌ ಎಂದು ಕೇಳಿದ್ದೆವು. ಮತದಾರರು ಅತ್ಯಧಿಕ ಮತಗಳಿಂದ ಗೆಲ್ಲಿಸಿದ್ದರು. ಈ ಚುನಾವಣೆಯಲ್ಲೂ ಅಂಥದ್ದೇ ಫಲಿತಾಂಶ ಬರಲಿದೆ. ಇನ್ನೂ ಹೆಚ್ಚು ಮತಗಳಿಂದ ಉಗ್ರಪ್ಪ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಲ್ಲ ಶಾಸಕರೂ ನಾಮಪತ್ರ‌ ಸಲ್ಲಿಕೆ ಸಂದರ್ಭದಲ್ಲಿ ಉಗ್ರಪ್ಪ‌ ಜೊತೆಗೆ ಬಂದಿರುವುದು ಒಗ್ಗಟ್ಟಿಗೆ ಸಾಕ್ಷಿಯಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ‌ ಸಚಿವನಾಗಿ ನನ್ನ ಆದ್ಯತೆ ಬಳ್ಳಾರಿಯೇ. ಇಲ್ಲಿನ ಗೆಲುವಿಗೆ ಶ್ರಮಿಸುವೆ ಎಂದರು.

ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳನ್ನು ಅಧಿಕಾರಕ್ಕೆ ತರಲು ಮತದಾರರು ಬೆಂಬಲ ನೀಡಲಿದ್ದಾರೆ ಎಂದು ಅಭ್ಯರ್ಥಿ ಉಗ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಉಗ್ರಪ್ಪ‌ ನಾಲ್ಕು ನಾಮಪತ್ರ‌ ಸಲ್ಲಿಸಿದ್ದು, ಅವರೊಂದಿಗೆ ಸಚಿವರಾದ ಈ.ತುಕಾರಾಂ, ಪಿ.ಟಿ.ಪರಮೇಶ್ವರ ನಾಯ್ಕ, ಸಂಸದ ಸೈಯದ್ ನಾಸಿರ್ ಹುಸೇನ್ ಶಾಸಕರಾದ ಆನಂದ್ ಸಿಂಗ್, ಬಿ.ನಾಗೇಂದ್ರ, ಎಲ್‌ಬಿಪಿ ಭೀಮಾನಾಯ್ಕ, ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಉಗ್ರಪ್ಪ ಪತ್ನಿ ಮಂಜುಳಾ, ಗ್ರಾಮಾಂತರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಆಶಾಲತಾ, ಅನಿಲ್ ಲಾಡ್ ಇದ್ದರು.

ಬರಹ ಇಷ್ಟವಾಯಿತೆ?

 • 11

  Happy
 • 2

  Amused
 • 0

  Sad
 • 2

  Frustrated
 • 8

  Angry

Comments:

0 comments

Write the first review for this !