ಬುಧವಾರ, ಜನವರಿ 29, 2020
30 °C

ವಿಜಯನಗರ | ಜಯದ ನಗೆ ಬೀರಿದ ಆನಂದ್ ಸಿಂಗ್: ಕಾಂಗ್ರೆಸ್‌ಗೆ ಭಾರಿ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ತೀವ್ರ ಕುತೂಹಲ ಕೆರಳಿಸಿದ್ದ ವಿಜಯನಗರ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಜಯದ ನಗೆಬೀರಿದ್ದಾರೆ. ಕಾಂಗ್ರೆಸ್‌ ಹಾಗು ಬಿಜೆಪಿ ಪಕ್ಷಗಳ ನಡುವಣ ನೇರ ಪೈಪೋಟ ಈ ಕ್ಷೇತ‌್ರದಲ್ಲಿ ಅವರು 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಆನಂದ್‌, ಈ ಬಾರಿ ಒಟ್ಟು 85,332 ಮತಗಳನ್ನು ಪಡೆದುಕೊಂಡರು. ಕಾಂಗ್ರೆಸ್‌ನ ವಿ.ವೈ.ಘೋರ್ಪಡೆ 55,270 ಮತಗಳನ್ನು ಪಡೆದುಕೊಂಡರು. ಜೆಡಿಎಸ್‌ ಅಭ್ಯರ್ಥಿ ಎನ್.ಎಂ.ನಬಿ ಕೇವಲ 3,871 ಮತ ಪಡೆದರು. 1,813 ಮಂದಿ ನೋಟಾ ಚಲಾಯಿಸಿದ್ದಾರೆ.

2018ರ ಚುನಾವಣೆಯಲ್ಲಿ 83,214 ಮತಗಳನ್ನು ಪಡೆದಿದ್ದ ಆನಂದ್ ಸಿಂಗ್, ಬಿಜೆಪಿಯ ಎಚ್‌.ಆರ್‌.ಗವಿಯಪ್ಪ(74,986) ವಿರುದ್ಧ 8,228‬ ಮತಗಳ ಅಂತರಿಂದ ಗೆದ್ದಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು