ಬೆಂಗಳೂರು: ರಾಜ್ಯ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಂ. ಅಬ್ದುಲ್ ಸಲೀಂ ಸೇರಿದಂತೆ 10 ಐಪಿಎಸ್ ಅಧಿಕಾರಿಗಳನ್ನು ಸೋಮವಾರ ವರ್ಗಾವಣೆ ಮಾಡಿರುವ ಸರ್ಕಾರ, ಪೊಲೀಸ್ ಇಲಾಖೆಯಲ್ಲಿ ಭಾರಿ ಬದಲಾವಣೆ ಮಾಡಿದೆ.

ಪೊಲೀಸ್ ಆಡಳಿತ ವಿಭಾಗದ ಎಡಿಜಿಪಿ ಆಗಿದ್ದ ಎ. ಪರಶಿವಮೂರ್ತಿ ಅವರನ್ನು ಬೆಂಗಳೂರು ಸಿಸಿಬಿಯ ಹೆಚ್ಚುವರಿ ಪೊಲೀಸ್ ಕಮಿಷನರ್ ಆಗಿ ನೇಮಿಸಲಾಗಿದೆ.

ಸಿಸಿಬಿ ಡಿಸಿಪಿ ಎಸ್. ಗಿರೀಶ್ ಅವರನ್ನು ಕೆಎಸ್‌ಆರ್‌ಪಿ 9ನೇ ಬೆಟಾಲಿಯನ್‌ನ ಕಮಾಂಡೆಂಟ್ ಆಗಿ ವರ್ಗಾಯಿಸಲಾಗಿದೆ. ಅವರ ಜಾಗಕ್ಕೆ ಕುಲದೀಪ್‌ಕುಮಾರ್ ಜೈನ್ ಅವರನ್ನು ನೇಮಕ ಮಾಡಲಾಗಿದೆ.

ಪೊಲೀಸ್ ಪಡೆ ಮುಖ್ಯಸ್ಥರಾಗಿ ಮೊನ್ನೆಯಷ್ಟೇ ವರ್ಗಾವಣೆಯಾಗಿದ್ದ ಬಿ.ಆರ್. ರವಿಕಾಂತೇಗೌಡ ಅವರನ್ನು ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಆಗಿ ನೇಮಿಸಲಾಗಿದೆ. ಈ ಸ್ಥಾನದಲ್ಲಿದ್ದ ಪಿ.ಹರಿಶೇಖರನ್ ಅವರನ್ನು ಕೆಎಸ್‌ಆರ್‌ಪಿ ಐಜಿಪಿ ಆಗಿ ವರ್ಗಾಯಿಸಲಾಗಿದೆ.

ವರ್ಗಾವಣೆಯಾದವರು: ಎಂ.ಅಬ್ದುಲ್ ಸಲೀಂ– ಎಡಿಜಿಪಿ (ಆಡಳಿತ), ಪಿ.ಎಸ್. ಹರ್ಷ– ಮಂಗಳೂರು ಕಮಿಷನರ್, ರವಿ ಚನ್ನಣ್ಣನವರ – ಬೆಂಗಳೂರು ಗ್ರಾಮಾಂತರ ಎಸ್ಪಿ, ಬಿ.ದಯಾನಂದ್– ಐಜಿಪಿ (ಸಿಐಡಿ), ಅರುಣಾಗುಸ್ ಗಿರಿ (ಡಿಸಿಪಿ) ಮಂಗಳೂರು ನಗರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.