ಭಾನುವಾರ, ಏಪ್ರಿಲ್ 5, 2020
19 °C

ರಾತ್ರಿ 9ರ ನಂತರವೂ ನಿಷೇಧಾಜ್ಞೆ; ಇಬ್ಬರು ಸೇರಿದರೆ ಶಿಸ್ತುಕ್ರಮ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೊರೊನಾ’ ವೈರಾಣು ಹರಡದಂತೆ ತಡೆಯಲು ಕರೆ ನೀಡಿದ್ದ ಜನತಾ ಕರ್ಫ್ಯೂ ರಾತ್ರಿ 9 ಗಂಟೆಗೆ ಮುಗಿಯಲಿದ್ದು, ಅದಾದ ಬಳಿಕವೂ ತಡರಾತ್ರಿ 12ರವರೆಗೆ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಬೆಳಿಗ್ಗೆಯಿಂದ ನಗರದಲ್ಲಿ ಕರ್ಫ್ಯೂ ಇದ್ದು, ಬಹುತೇಕರು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಹಲವರು ರಾತ್ರಿ 9ಕ್ಕೆ ಹೊರಗೆ ಬರಲು ಯೋಚಿಸುತ್ತಿದ್ದಾರೆ. ಅವರೆಲ್ಲ ಏಕಾಏಕಿ ಮನೆಯಿಂದ ಹೊರಗೆ ಬಂದರೆ ಪುನಃ ಗುಂಪು ಸೇರುವ ಸಾಧ್ಯತೆ ಇರುತ್ತದೆ. ವೈರಾಣು ಸಹ ಹರಡುವ ಸಂಭವವೂ ಇರುತ್ತದೆ. ಇದೇ ಕಾರಣಕ್ಕೆ ನಗರ ಪೊಲೀಸರ ಕಮಿಷನರ್, ಸೆಕ್ಷನ್ 144 (1) ಅಡಿ ನಿಷೇಧಾಜ್ಞೆ ಜಾರಿಗೊಳಿಸಿ ಭಾನುವಾರ ಹೊರಡಿಸಿದ್ದಾರೆ.

‘ಮಾ. 22ರ ರಾತ್ರಿ 9ಗಂಟೆಯಿಂದ ತಡರಾತ್ರಿ 12ರವರೆಗೆ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಜನರು ಅನಗತ್ಯವಾಗಿ ಮನೆಯಿಂದ ಹೊರಬಂದು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದು, ಅಂಗಡಿ–ಮುಂಗಟ್ಟುಗಳನ್ನು ತೆರೆಯುವುದು ಹಾಗೂ ವಾತಾವರಣವನ್ನು ಕಲುಷಿತಗೊಳಿಸುವಂಥ ಎಲ್ಲ ರೀತಿಯ ಕೃತ್ಯಗಳನ್ನು ನಿಷೇಧಿಸಿದೆ. ಜನರು ಕಟ್ಟುನಿಟ್ಟಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು’ ಎಂದು ನಿಷೇಧಾಜ್ಞೆ ಆದೇಶದಲ್ಲಿ ತಿಳಿಸಲಾಗಿದೆ.  ‌

‘ಕೊರೊನಾ ವೈರಾಣು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ನಿಷೇಧಾಜ್ಞೆ ಹೊರಡಿಸಲಾಗಿದೆ’ ಎಂದೂ ಉಲ್ಲೇಖಿಸಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)