ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದರಾಮಯ್ಯ ಅವಧಿಯಲ್ಲಿ ₹2,500 ಕೋಟಿ ಟಿಡಿಆರ್‌ ಹಗರಣ: ದಾಖಲೆ ಬಿಡುಗಡೆ

Last Updated 20 ಮಾರ್ಚ್ 2023, 20:07 IST
ಅಕ್ಷರ ಗಾತ್ರ

ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ₹2,500 ಕೋಟಿಗೂ ಹೆಚ್ಚು ಮೊತ್ತದ ಟಿಡಿಆರ್‌ ಹಗರಣ ನಡೆದಿದೆ ಎಂದು 9,630 ಪುಟಗಳಷ್ಟು ದಾಖಲೆಯನ್ನು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಎನ್‌.ಆರ್‌. ರಮೇಶ್‌ ಅವರು ಬಿಡುಗಡೆ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ರಮೇಶ್‌ ಅವರು, ‘ಈ ಹಗರಣದಲ್ಲಿ ಬಿಬಿಎಂಪಿ ಹಾಗೂ ಬಿಎಂಐಸಿಎಪಿಎಯ ಅಧಿಕಾರಿಗಳೂ ಭಾಗಿಯಾಗಿದ್ದಾರೆ’ ಎಂದು ದೂರಿದರು.

‘ಪ್ರವೀಣ್ ಪಿ. ಷಾ ಪಾಲುದಾರರಾಗಿರುವ ವೆಂಕಟೇಶ್ವರ ಡೆವಲಪರ್ಸ್, ವಿಕ್ರಮ್ ಓಸ್ವಾಲ್ ಪಾಲುದಾರರಾಗಿರುವ ಬಾಲಾಜಿ ಇನ್‍ ಫ್ರಾಸ್ಟಕ್ಚರ್ಸ್ ಆ್ಯಂಡ್‌ ಡೆವಲಪರ್ಸ್, ಸಿ.ಟಿ. ತಿಮ್ಮಯ್ಯ, ಸಿ.ಟಿ. ಮರಿರಾಜು ಅವರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ. ರಾಮನಗರದ ಮಾಗಡಿಯ ಕೊಡಿಯಾಲ ಕರೇನ ಹಳ್ಳಿಯಲ್ಲಿ 40 ಎಕರೆ ಭೂಮಿ ಖರೀದಿಸಿ, ಬಿಬಿಎಂಪಿಗಾಗಿ ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಾಪಿಸುವುದಾಗಿ ಹೇಳಲಾಗಿತ್ತು. ಈ ಸ್ವತ್ತನ್ನು ‘ಬೆಂಗಳೂರು - ಮೈಸೂರು ಮೂಲಸೌಕರ್ಯ ಮಾರ್ಗ ಯೋಜನಾ ಪ್ರಾಧಿಕಾರ (ಬಿಎಂಐಸಿಎಪಿಎ) ಮೂಲಕ ಬಿಬಿಎಂಪಿಗೆ ಹಸ್ತಾಂತರಿಸಿ ಟಿಡಿಆರ್‌ ನೀಡಬೇಕೆಂದು ಪ್ರಸ್ತಾವ ಸಲ್ಲಿಸಿದ್ದರು’ ಎಂದು ಹೇಳಿದರು.

‘ಇದಾದ ಮೇಲೆ ಹಲವು ಹಿರಿಯ ಅಧಿಕಾರಿಗಳ ಸಹಾಯದಿಂದ ₹65 ಕೋಟಿ ಮೊತ್ತದ ಸ್ವತ್ತಿಗೆ ₹2,644 ಕೋಟಿ ಮೌಲ್ಯದ ಟಿಡಿಆರ್‌ ಅನ್ನುರಿಗ್‌ ‘ಎ’ನಲ್ಲಿ ಪಡೆದುಕೊಂಡಿದ್ದಾರೆ. ಇದು ಅತಿದೊಡ್ಡ ಹಗರಣವಾಗಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಪತ್ರ ಬರೆಯಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT