ಬೆಂಗಳೂರು: ಹೂಡಿಕೆ ಹೆಸರಿನಲ್ಲಿ ಮಹಿಳೆಯರಿಗೆ ₹50 ಕೋಟಿ ವಂಚಿಸಿರುವ ಆರೋಪದಡಿ ಬ್ಯೂಟಿ ಪಾರ್ಲರ್ವೊಂದರ ಮಾಲೀಕರ ವಿರುದ್ಧ ಗೋವಿಂದರಾಜ ನಗರ, ತಲಘಟ್ಟಪುರ, ಸಿಸಿಬಿ ದೂರು ನೀಡಲಾಗಿದೆ.

ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಗರವೂ ಸೇರಿದಂತೆ ವಿವಿಧೆಡೆ ಶಾಖೆಗಳನ್ನು ಹೊಂದಿರುವ ಬ್ಯೂಟಿ ಪಾರ್ಲರ್ ಮಾಲೀಕರು, ಶ್ರೀಮಂತ ಮಹಿಳೆಯರನ್ನೇ ಗುರಿಯಾಗಿಸಿ ವಂಚನೆ ನಡೆಸಿದ್ದಾರೆ ಎಂದು ದೂರು ನೀಡಲಾಗಿದೆ.

‘ಹೂಡಿಕೆ ಮಾಡಿದರೆ ಲಕ್ಷಾಂತರ ರೂಪಾಯಿ ಲಾಭ ಮಾಡಬಹುದು ಎಂದು ಬ್ಯೂಟಿ ಪಾರ್ಲರ್ ಮಾಲೀಕರು ನಂಬಿಸಿದ್ದರು. ಮಾಲೀಕರ ಮಾತು ನಂಬಿದ್ದ ಮಹಿಳೆಯರು, ₹10 ಲಕ್ಷದಿಂದ ₹ 50 ಲಕ್ಷದ ವರೆಗೂ ಹೂಡಿಕೆ ಮಾಡಿದ್ದರು. ಹಲವು ತಿಂಗಳು ಕಳೆದರೂ ಲಾಭಾಂಶ ಸಿಗದ ಕಾರಣ ಮಹಿಳೆಯರು ದೂರು ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.