ಬೆಂಗಳೂರು: ಸಾಲದ ಸಮಸ್ಯೆ ಹಾಗೂ ಪ್ರೇಮ ವೈಫಲ್ಯದಿಂದ ಖಿನ್ನತೆಗೆ ಒಳಗಾಗಿದ್ದ ಖಾಸಗಿ ಕಂಪನಿ ಉದ್ಯೋಗಿ ರಾಜೇಶ್ (26) ಎಂಬುವರು ಶುಕ್ರವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜೆ.ಸಿ.ನಗರದ ಕುರುಬರಹಳ್ಳಿ ನಿವಾಸಿಯಾದ ರಾಜೇಶ್, ಆತ್ಮಹತ್ಯೆಗೂ ಮುನ್ನ 2.49 ನಿಮಿಷಗಳ ಸೆಲ್ಫಿ ವಿಡಿಯೊ ಮಾಡಿಟ್ಟಿದ್ದಾರೆ.

‘ಕಿರಣ್ ಅವರೇ ಫೈನಾನ್ಸ್ ತಗೊಂಡಿದ್ದು ನಾನು. ದಯವಿಟ್ಟು ನನ್ನ ಕುಟುಂಬ ಸದಸ್ಯರಿಗೆ ತೊಂದರೆ ಕೊಡಬೇಡಿ. ಯಾರೂ ಫೈನಾನ್ಶಿಯರ್‌ಗಳ ಬಳಿ ಸಾಲ ಮಾಡಬೇಡಿ’ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.

‘ನೀನು ತುಂಬ ನೋವು ಕೊಟ್ಟೆ ಕಣೆ. ನನ್ನ ಜತೆಯೇ ಇರುತ್ತೀಯಾ ಎಂದುಕೊಂಡಿದ್ದೆ. ಅರ್ಧಕ್ಕೇ ಬಿಟ್ಟು ಹೋಗಿ ದೊಡ್ಡ ತಪ್ಪು ಮಾಡಿದೆ. ಅಪ್ಪ–ಅಮ್ಮ ಕ್ಷಮಿಸಿ. ನಾನು ಸಾಯುತ್ತಿದ್ದೇನೆ’ ಎಂದೂ ಹೇಳಿದ್ದಾರೆ.

ರಾಜೇಶ್ ಪೋಷಕರು ಸಂಜೆ ದೇವಸ್ಥಾನಕ್ಕೆ ಹೋಗಿದ್ದರು. ರಾತ್ರಿ 7.15ಕ್ಕೆ ಸೆಲ್ಫಿ ವಿಡಿಯೊ ಮಾಡಿರುವ ಅವರು, ನಂತರ ಕೋಣೆಯಲ್ಲೇ ನೇಣು ಹಾಕಿಕೊಂಡಿದ್ದಾರೆ. ತಮ್ಮ ಪ್ರದೀಪ್ ಕೆಲಸದಿಂದ 8 ಗಂಟೆ ಸುಮಾರಿಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಅನುಮಾನಾಸ್ಪದ ಸಾವು (174ಸಿ) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಮಹಾಲಕ್ಷ್ಮಿಲೇಔಟ್
ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.