ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಟ್ಟೆಯಲ್ಲಿ 9 ಕೆ.ಜಿ ಗ‌ಡ್ಡೆ ಯಶಸ್ವಿ ಶಸ್ತ್ರಚಿಕಿತ್ಸೆ

Last Updated 4 ಸೆಪ್ಟೆಂಬರ್ 2019, 20:04 IST
ಅಕ್ಷರ ಗಾತ್ರ

ಬೆಂಗಳೂರು:ವ್ಯಕ್ತಿಯೊಬ್ಬರ ದೇಹದಲ್ಲಿ ಸಂಗ್ರಹವಾಗಿದ್ದ 9 ಕೆ.ಜಿ ತೂಕದ ಗಡ್ಡೆಯನ್ನುಮಣಿಪಾಲ್ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ.

ಪಶ್ಚಿಮ ಬಂಗಾಳದ 41 ವರ್ಷದ ಅಟಲ್ ಸರ್ಕಾರ್ ಎಂಬುವರು ಮೂರು ತಿಂಗಳುಗಳಿಂದ ಹೊಟ್ಟೆಯ ಕೆಳಭಾಗದಲ್ಲಿ ನೋವು, ಮಲಬದ್ಧತೆ ಹಾಗೂ ಊತದ ಸಮಸ್ಯೆಯಿಂದ ಬಳಲುತ್ತಿದ್ದರು. ಹೊಟ್ಟೆಯಲ್ಲಿರೆಟ್ರೋಪೆರಿಟೋನಿಯಲ್ ಮಾಸ್ ಗಡ್ಡೆ ಇರುವುದು ಪತ್ತೆಯಾಯಿತು.ಇದರಿಂದ ಕರುಳಿನ ಭಾಗ ಗಮನಾರ್ಹವಾಗಿ ಪಕ್ಕಕ್ಕೆ ತಳ್ಳಲ್ಪಟ್ಟಿತ್ತು. ಜೊತೆಗೆ ಮೂತ್ರನಾಳಗಳ ಮೇಲೆ ಒತ್ತಡ ಉಂಟಾಗುತ್ತಿತ್ತು. ಹೀಗಾಗಿ, ಲ್ಯಾಪರೋಟೋಮಿ ಶಸ್ತ್ರಚಿಕಿತ್ಸೆ ಮಾಡಲಾಯಿತು.

‘ಕರುಳುಗಳ ಹಿಂದೆ ಬೆಳೆದಿದ್ದ ಗಡ್ಡೆಯಿಂದ ರೋಗಿಗೆ ತಿನ್ನಲು, ಕುಡಿಯಲು ಕಷ್ಟವಾಗುತ್ತಿತ್ತು. ಆರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ಗಡ್ಡೆಯನ್ನು ಹೊರತೆಗೆಯಲಾಯಿತು. ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ’ ಎಂದು ಮಣಿಪಾಲ್‌ಆಸ್ಪತ್ರೆಯ ತಜ್ಞ ಡಾ.ಶಬೀರ್ ಎಸ್.ಜವೇರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT