ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರಗೆ ಮಹಿಳೆ ಬೆದರಿಕೆ; ದೂರು ದಾಖಲು

Published 26 ಜುಲೈ 2023, 14:10 IST
Last Updated 26 ಜುಲೈ 2023, 14:10 IST
ಅಕ್ಷರ ಗಾತ್ರ

ಬೆಂಗಳೂರು: ದಾವಣಗೆರೆಯ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ ಅವರಿಗೆ ವಾಟ್ಸ್‌ಆ್ಯಪ್‌ನಲ್ಲಿ ಕರೆ ಮಾಡಿದ ಮಹಿಳೆಯೊಬ್ಬರು ಪೋಟೊ ಹಾಗೂ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕುವುದಾಗಿ ಬೆದರಿಕೆಯೊಡ್ಡಿದ್ದು, ಈ ಸಂಬಂಧ ನಗರದ ಕಮರ್ಷಿಯಲ್‌ ಸ್ಟ್ರೀಟ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಜುಲೈ 21ರಂದು ಪ್ರಕರಣ ದಾಖಲಿಸಿಕೊಂಡು ಕರೆ ಮಾಡಿರುವ ಮೊಬೈಲ್‌ ಸಂಖ್ಯೆ ಆಧರಿಸಿ ತನಿಖೆ ಕೈಗೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಜುಲೈ 20ರಂದು ಬೆಂಗಳೂರಿನಲ್ಲಿರುವಾಗ ರಾತ್ರಿ 10.16ರ ಸುಮಾರಿಗೆ ಮಹಿಳೆಯೊಬ್ಬರು ವಾಟ್ಸ್‌ಆ್ಯಪ್‌ನಲ್ಲಿ ಹೇಗಿದ್ದೀರಾ ಎನ್ನುವ ಸಂದೇಶ ಕಳುಹಿಸಿದ್ದರು. ಇದಕ್ಕೆ ನಾನು ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡಿರಲಿಲ್ಲ. ನಂತರ, 10.22ಕ್ಕೆ ವಿಡಿಯೊ ಕರೆ ಮಾಡಿ ಹಿಂದಿ ಭಾಷೆಯಲ್ಲಿ ಮಾತನಾಡಲು ಆರಂಭಿಸಿದರು. ಕರೆ ಮಾಡುತ್ತಿರುವ ಉದ್ದೇಶದ ಬಗ್ಗೆ ಹಿಂದಿಯಲ್ಲೇ ಪ್ರಶ್ನಿಸಿದೆ. ಆಗ ಅಶ್ಲೀಲ ಪದ ಬಳಕೆ ಮಾಡಿದ್ದರು. ತಕ್ಷಣವೇ ಕರೆ ಕಡಿತಗೊಳಿಸಿದೆ ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಮತ್ತೆ ವಿಡಿಯೊ ಕರೆ ಮಾಡಿ ಆಕೆಯ ಮುಖ ಹಾಗೂ ಖಾಸಗಿ ಅಂಗಾಂಗ ಪ್ರದರ್ಶನ ಮಾಡಲಾಯಿತು. ಅಸಭ್ಯವಾಗಿ ಮಾತನಾಡಿದರು. ಪಕ್ಕದಲ್ಲಿದ್ದ ಪತ್ನಿಗೆ ಮೊಬೈಲ್‌ ನೀಡಿದೆ. ಐದು ಬಾರಿ ಕರೆ ಮಾಡಿ, ಫೋಟೊ ಹಾಗೂ ವಿಡಿಯೊವನ್ನು ಫೇಸ್‌ಬುಕ್‌, ಯುಟ್ಯೂಬ್‌, ಗೂಗಲ್‌ಗೆ ಹಾಕಲಾಗುವುದೆಂದು ಬೆದರಿಕೆ ಹಾಕಿದರು’ ಎಂದು ಸಂಸದ ಸಿದ್ದೇಶ್ವರ ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT