ಬೆಂಗಳೂರು: ಮೆಟ್ರೊ ರೈಲಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಪರ್ಸ್ ಕಳ್ಳತನವಾಗಿದ್ದು, ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಹಲಸೂರು ಬಳಿಯ ಕೇಂಬ್ರಿಜ್ ಲೇಔಟ್ ನಿವಾಸಿ, 51 ವರ್ಷದ ಮಹಿಳೆ ದೂರು ನೀಡಿದ್ದಾರೆ. ಮೆಟ್ರೊ ರೈಲಿನಲ್ಲಿ ಕೃತ್ಯ ನಡೆದಿರುವ ಕಾರಣ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಮಹಿಳೆ, ನ.10ರಂದು ಹಲಸೂರಿನಿಂದ ಕೆಂಗೇರಿಗೆ ಹೊರಟಿದ್ದರು. ಮೆಜೆಸ್ಟಿಕ್ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಿತ್ತು. ಜನಸಂದಣಿ ನಡುವೆಯೇ ದೂರುದಾರ ಮಹಿಳೆ ಬ್ಯಾಗ್ ಪರಿಶೀಲಿಸಿದ್ದು, ಜಿಪ್ ತೆರೆದಿರುವುದು ಕಂಡಿತ್ತು. ಬ್ಯಾಗ್‌ನಲ್ಲಿ ಪರ್ಸ್ ಇರಲಿಲ್ಲ.’
‘ಗಾಬರಿಗೊಂಡ ಮಹಿಳೆ, ವಿಜಯನಗರ ಮೆಟ್ರೊ ನಿಲ್ದಾಣದಲ್ಲಿ ಇಳಿದಿದ್ದರು. ನಂತರ, ನಿಲ್ದಾಣದ ಸಿಬ್ಬಂದಿಗೆ ವಿಷಯ ತಿಳಿಸಿದ್ದರು. ಇದಾದ ನಂತರವೇ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘₹10,000 ನಗದು, ಚಾಲನಾ ಪರವಾನಗಿ ಪತ್ರ, ಆಧಾರ್, ಮತದಾರದ ಗುರುತಿನ ಚೀಟಿ, ಇತರೆ ದಾಖಲೆಗಳಿದ್ದವು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.