ಭಾನುವಾರ, ಜನವರಿ 26, 2020
25 °C

ಭೂ ವಿವಾದ: ಮಹಿಳೆಗೆ ಆ್ಯಸಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಮೀನು ವಿವಾದ ಸಂಬಂಧ ಠಾಣೆಯಲ್ಲಿ ದಾಖಲಿಸಿದ್ದ ದೂರು ವಾಪಸು ಪಡೆಯದ ಕಾರಣಕ್ಕೆ ಮಹಿಳೆಯೊಬ್ಬರ ಮೇಲೆ ದುಷ್ಕರ್ಮಿಗಳು ಆ್ಯಸಿಡ್ ಎರಚಿಸಿರುವ ಘಟನೆ ಕೆ.ಆರ್. ಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಿಗೇಹಳ್ಳಿ ನಿವಾಸಿ ಪ್ರಭಾವತಿ (38) ಅವರ ಎದೆ ಮತ್ತು ಎಡಗೈಗೆ ಆ್ಯಸಿಡ್ ಬಿದ್ದಿದ್ದು ಅಪಾಯದಿಂದ ಪಾರಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ರವಿ, ರಘು, ಕಬಾಲನ್, ಆಶೀರ್ವಾದಂ, ಮುನಿರೆಡ್ಡಿ, ಸಚಿನ್, ಕುಮಾರೇಶನ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಪತಿ ರಾಧಾಕೃಷ್ಣ ರೆಡ್ಡಿ ಮತ್ತು ಇಬ್ಬರು ಮಕ್ಕಳ ಜತೆ ಪ್ರಭಾವತಿ ಸ್ವಂತ ಮನೆಯಲ್ಲಿ ನೆಲೆಸಿದ್ದಾರೆ. ಅದೇ ಗ್ರಾಮದಲ್ಲಿ ಅವರಿಗೆ ಸೇರಿದ ಒಂದು ಎಕರೆ ಆರು ಗುಂಟೆ ಜಮೀನಿದೆ. ಜಮೀನಿ
ನಲ್ಲಿ ರಾಧಾಕೃಷ್ಣ 20 ಮನೆಗಳನ್ನು ಕಟ್ಟಿ, ಬಾಡಿಗೆಗೆ ಕೊಟ್ಟಿದ್ದಾರೆ. ಉಳಿದ ಜಾಗ ತಮ್ಮದೆಂದು ರವಿ, ಕುಮಾರ್, ಆಶೀರ್ವಾದ, ಶೇಖರ್ ಎರಡು ವರ್ಷಗಳಿಂದ ಕಿರುಕುಳ ನೀಡುತ್ತಿದ್ದರು.

ಸ್ಥಳಕ್ಕೆ ಬಂದಿದ್ದ ಕೆ.ಆರ್. ಪುರ ಠಾಣೆಯ ಅಂದಿನ ಸಬ್ ಇನ್‌ಸ್ಪೆಕ್ಟರ್ ಮಂಜುನಾಥ್ ಮತ್ತು ಸಿಬ್ಬಂದಿ ಕೂಡ ರಾಧಾಕೃಷ್ಣ ಅವರ ಕುಟುಂಬದವರಿಗೆ ನಿಂದಿಸಿ, ಗುಂಡು ಹಾರಿಸಿ ಹತ್ಯೆ ಮಾಡುವುದಾಗಿ ಬೆದರಿಸಿದ್ದರು. ಈ ಸಂಬಂಧ ರಾಧಾಕೃಷ್ಣ ಕುಟುಂಬ ಹಿರಿಯ ಅಧಿಕಾರಿಗಳ ಮೊರೆ ಹೋಗಿದ್ದರು. ಅಲ್ಲದೆ, ಸಬ್ ಇನ್‌ಸ್ಪೆಕ್ಟರ್ ಮಂಜುನಾಥ್ ಹಾಗೂ ಇತರ ವಿರುದ್ಧ ಕೆ.ಆರ್.ಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಪ್ರಕರಣ ಹಿಂಪಡೆಯುವಂತೆ ಬೆದರಿ ಕೆಒಡ್ಡುತ್ತಿದ್ದರು ಎಂದು ಹೇಳಲಾಗಿದೆ.

ದೂರು ಹಿಂಪಡೆಯದಿದ್ದರೆ ಒಂದು ಗತಿ ಕಾಣಿಸುತ್ತೇನೆ’ ಎಂದು ಆಶೀರ್ವಾದಂ ಹೆದರಿಸಿದ್ದಾನೆ. ಇದಕ್ಕೆ ಪ್ರಭಾವತಿ ಪ್ರತಿಕ್ರಿಯಿಸಿಲ್ಲ. ಈ ವೇಳೆ ಹಿಂದಿನಿಂದ, ದ್ವಿಚಕ್ರ ವಾಹನದಲ್ಲಿ ಬಂದು ಆ್ಯಸಿಡ್ ಎರಚಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು