ಬೆಂಗಳೂರು: ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಕಾರೊಂದು ಗುದ್ದಿದ್ದರಿಂದಾಗಿ ಚಿಕ್ಕಜಾಲ ಸಂಚಾರ ಠಾಣೆ ಹೆಡ್ ಕಾನ್ಸ್ಟೆಬಲ್ ಧನಂಜಯ್ಯ (40) ದುರ್ಮರಣಕ್ಕೀಡಾಗಿದ್ದಾರೆ.

ಘಟನೆಯಲ್ಲಿ ಕಾನ್ಸ್ಟೆಬಲ್ ಉಮಾ ಮಹೇಶ್ವರ್ (30) ಎಂಬುವರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕ ಕುಶಾಲ್ ರಾಜ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಧನಂಜಯ್ಯ ಹಾಗೂ ಉಮಾಮಹೇಶ್ವರ್ ಅವರು ಠಾಣೆ ವ್ಯಾಪ್ತಿಯ ಕಾಡೇನಹಳ್ಳಿ ರಸ್ತೆಯಲ್ಲಿ ಶನಿವಾರ ಸಂಜೆ 5.30ರ ಸುಮಾರಿಗೆ ವಾಹನಗಳ ತಪಾಸಣೆ ನಡೆಸುವ ಕರ್ತವ್ಯದಲ್ಲಿದ್ದರು. ಇದೇ ವೇಳೆ ಈ ಅವಘಡ ಸಂಭವಿಸಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ರಸ್ತೆ ಪಕ್ಕದಲ್ಲಿ ವಾಹನ ವೊಂದನ್ನು ತಡೆದು ತಪಾಸಣೆ ಮಾಡುತ್ತಿದ್ದರು. ಅದೇ ಸಂದರ್ಭದಲ್ಲೇ ನಗರದಿಂದ ವಿಮಾನ ನಿಲ್ದಾಣದತ್ತ ಹೊರಟಿದ್ದ ಕುಶಾಲ್ರಾಜ್, ವೇಗ, ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ವಾಹನಕ್ಕೆ ಡಿಕ್ಕಿ ಹೊಡೆಸಿದ್ದ. ವಾಹನದ ಪಕ್ಕದಲ್ಲೇ ನಿಂತಿದ್ದ ಧನಂಜಯ್ಯ ಹಾಗೂ ಉಮಾಮಹೇಶ್ವರ್ ಅವರಿಗೂ ಕಾರು ಗುದ್ದಿಸಿದ್ದ.’ ಎಂದರು.

‘ಬಟ್ಟೆ ವ್ಯಾಪಾರಿ ಕುಶಾಲ್ರಾಜ್, ವಿಮಾನ ನಿಲ್ದಾಣಕ್ಕೆ ಹೋಗುವ ಅವಸರದಲ್ಲಿ ಅತೀ ವೇಗವಾಗಿ ಕಾರು ಓಡಿಸಿದ್ದ. ಈ ಬಗ್ಗೆ ಆತ ಹೇಳಿಕೆ ನೀಡಿದ್ದಾನೆ. ಆತನ ಕಾರನ್ನೂ ಜಪ್ತಿ ಮಾಡಲಾಗಿದೆ’ ಎಂದು ಅಧಿಕಾರಿ ಹೇಳಿದರು.

ಇತ್ತೀಚೆಗಷ್ಟೇ ಕರ್ತವ್ಯ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ನಂದಿನಿ ಲೇಔಟ್ ಠಾಣೆಯ ಹೆಡ್ ಕಾನ್ ಸ್ಟೆಬಲ್ ಭಕ್ತರಾಮ್ (44) ಅವರು ಲಾರಿ ಗುದ್ದಿದ್ದರಿಂದ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.