ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಕಾ ಕ್ಲಬ್‌ನ 7ನೇ ಆವೃತ್ತಿಗೆ ಚಾಲನೆ ನೀಡಿದ ನಟಿ ಭಾವನಾ ರಾವ್‌

Published 29 ಜುಲೈ 2023, 16:18 IST
Last Updated 29 ಜುಲೈ 2023, 16:18 IST
ಅಕ್ಷರ ಗಾತ್ರ

ಬೆಂಗಳೂರು: ಮೈ ಮರೆಸಿದ ಸೌಂಡ್‌ ಹೀಲಿಂಗ್‌, ಬಾಯಲ್ಲಿ ನೀರೂರಿಸಿದ ಆರೋಗ್ಯಕರ ಸಲಾಡ್‌, ನಕ್ಕುನಗಿಸಿದ ಸ್ಟ್ಯಾಂಡಪ್‌ ಕಾಮಿಡಿ, ಮಧ್ಯೆ ಮಧ್ಯೆ ಪ್ರೇಕ್ಷಕರಿಗೆ ವಿವಿಧ ಆಟಗಳು.

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ನ ಭೂಮಿಕಾ ಕ್ಲಬ್‌ ಬನಶಂಕರಿಯ ಹೋಟೆಲ್ ಪೈ ವಿಸ್ಟಾದಲ್ಲಿ ಶನಿವಾರ ಆಯೋಜಿಸಿದ್ದ 7ನೇ ಆವೃತ್ತಿಯ ಕಾರ್ಯಕ್ರಮದ ಸಂಭ್ರಮ ಇದು.

‘ಫ್ರೀಡಂ ಆಯಿಲ್’ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆರೋಗ್ಯಕರ ಅಡುಗೆ ಎಣ್ಣೆ ಬಗ್ಗೆಯೂ ತಿಳಿಸಿಕೊಡಲಾಯಿತು.

ನಟಿ ಭಾವನಾ ರಾವ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ‘ಮಹಿಳೆಯರು ಒಂದು ಕಡೆ ಕೂಡಿ ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ಹವ್ಯಾಸ’ ಎಂದು ಅವರು ಪ್ರಶಂಸಿಸಿದರು.

ಎಲ್ಲ ಮನುಷ್ಯರಿಗೂ ಒತ್ತಡ ಇದ್ದೇ ಇರುತ್ತದೆ. ಅದನ್ನು ನಿರ್ವಹಣೆ ಮಾಡುವುದು ಗೊತ್ತಿರಬೇಕು. ಇಂಥ ಕಾರ್ಯಕ್ರಮಗಳು, ಕಲಾ ಚಟುವಟಿಕೆಗಳು ಒತ್ತಡ ನಿರ್ವಹಣೆಗೆ ಉತ್ತಮ ಮಾರ್ಗ ಎಂದು ತಿಳಿಸಿದರು.

‘ನಮ್ಮ ದೇಹಕ್ಕೆ ಹೊಂದುವ ಆಹಾರ ಯಾವುದು ಎಂಬುದನ್ನು ಕಂಡುಕೊಂಡು ಸೇವಿಸಬೇಕು. ಯಾವುದೋ ಜಾಹಿರಾತು, ರೀಲ್ಸ್‌ಗಳನ್ನು ನೋಡಿ ಸೇವಿಸಬಾರದು’ ಎಂದು ಸಲಹೆ ನೀಡಿದರು.

‘ದೊಡ್ಡವಳಾದ ಮೇಲೆ ಏನಾಗಬೇಕು ಎಂದು ನನ್ನ ಶಾಲಾ ದಿನಗಳಲ್ಲಿ ಕೇಳುತ್ತಿದ್ದರು. ಆಗ ನಟಿಯಾಗಬೇಕು ಎಂದು ಹೇಳುತ್ತಿದ್ದೆ. ಆದರೆ ನಟನೆಯ ಬಗ್ಗೆ ಯಾವುದೇ ತಿಳಿವಳಿಕೆ ಇರಲಿಲ್ಲ. ಆದರೆ, ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದ ಆಸೆ ಅದಾಗಿತ್ತು. ಭರತನಾಟ್ಯ ಮತ್ತು ಪಾಶ್ಚಿಮಾತ್ಯ ನೃತ್ಯಗಳೆರಡನ್ನೂ ಕಲಿತಿದ್ದೇನೆ. ಎರಡೂ ಉತ್ತಮವಾದ ಕಲಾ ಪ್ರಕಾರಗಳು. ಆದರೆ, ನನ್ನನ್ನು ಗುರುತಿಸುವಂತಾಗಲು ಭರತನಾಟ್ಯ ಕಾರಣ’ ಎಂದು ಅನುಭವ ಹೇಳಿಕೊಂಡರು.

ಜಂಬೆ, ಕೊಳಲು, ಗಿಟಾರ್‌, ಹಾಡು ಹೀಗೆ ವಿವಿಧ ಸಂಗೀತ ಪರಿಕರಗಳನ್ನು ಬಳಸಿಕೊಂಡು ಶಕ್ತಿ ಅವರು ಸೌಂಡ್‌ ಹೀಲಿಂಗ್‌ ನಡೆಸಿಕೊಟ್ಟರು. ಅಪರ್ಣಾ ಅವರು ಅದಕ್ಕೆ ಧ್ವನಿ ಗೂಡಿಸಿದ್ದಲ್ಲದೇ ನೃತ್ಯದ ಮೂಲಕ ‘ಮಾನಸ್‌ ರಿಟ್ರೀಟ್‌’ ನಡೆಸಿದರು. ಶಕ್ತಿ–ಅಪರ್ಣಾ ಅವರ ಹೀಲಿಂಗ್‌ ಗೋಷ್ಠಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. 

‘ಹೀಲಿಂಗ್‌ ನಿಮಗೆ ಕಷ್ಟಗಳನ್ನು ಕಡಿಮೆ ಮಾಡುವುದಿಲ್ಲ. ಕಷ್ಟಗಳನ್ನು ಎದುರಿಸಲು ತಾಳ್ಮೆಯನ್ನು ಜಾಸ್ತಿ ಮಾಡುತ್ತದೆ. ಯಾರಿಗಾಗಿಯೋ ಬದುಕುವುದಕ್ಕಿಂತ ನಮಗಾಗಿ ಬದುಕಬೇಕು’ ಎಂದು ಅಪರ್ಣಾ ಸಲಹೆ ನೀಡಿದರು.

ಆರೋಗ್ಯಕರ ಅಡುಗೆ ಶೋವನ್ನು ಷೆಫ್‌ ಆದರ್ಶ್ ತಟಪತಿ ನಡೆಸಿಕೊಟ್ಟರು. ಮೆಡಿಟರೇನಿಯನ್ ಸಲಾಡ್‌ ತಯಾರಿಯ ಪ್ರಾತ್ಯಕ್ಷಿಕೆ ನೀಡಿದರು. ವಾರಕ್ಕೆ ಎರಡು ಅಥವಾ ಮೂರು ದಿನ ಈ ರೀತಿ ಸಲಾಡ್‌ ಮಾಡಿ ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.

ಮಿಮಿಕ್ರಿ ಗೋಪಿ ಅವರು ನಡೆಸಿಕೊಟ್ಟ ಸ್ಟ್ಯಾಂಡಪ್ ಕಾಮಿಡಿ ಎಲ್ಲರೂ ನಗೆಗಡಲಿನಲ್ಲಿ ತೇಲುವಂತೆ ಮಾಡಿತು. ನಿರೂಪಕಿ ನಿಖಿತಾ ಪ್ರೇಕ್ಷಕರಿಗೆ ವಿವಿಧ ಆಟಗಳನ್ನು ಆಡಿಸಿ ಹುರಿದುಂಬಿಸಿದರು. ಗೆದ್ದವರಿಗೆ ಉಡುಗೊರೆಗಳನ್ನು ನೀಡಲಾಯಿತು.

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ನ ಭೂಮಿಕಾ ಕ್ಲಬ್‌ ಶನಿವಾರ ಆಯೋಜಿಸಿದ್ದ 7ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ನೃತ್ಯ ಮತ್ತು ಸೌಂಡ್ ಹೀಲಿಂಗ್‌ ಅನ್ನು ಅಪರ್ಣಾ ಮತ್ತು ಶಕ್ತಿ ನಡೆಸಿಕೊಟ್ಟರು
‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ನ ಭೂಮಿಕಾ ಕ್ಲಬ್‌ ಶನಿವಾರ ಆಯೋಜಿಸಿದ್ದ 7ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ನೃತ್ಯ ಮತ್ತು ಸೌಂಡ್ ಹೀಲಿಂಗ್‌ ಅನ್ನು ಅಪರ್ಣಾ ಮತ್ತು ಶಕ್ತಿ ನಡೆಸಿಕೊಟ್ಟರು
ಆರೋಗ್ಯಕರ ಅಡುಗೆ ಶೋವನ್ನು ಷೆಫ್‌ ಆದರ್ಶ್ ತಟಪತಿ ನಡೆಸಿಕೊಟ್ಟರು.
ಆರೋಗ್ಯಕರ ಅಡುಗೆ ಶೋವನ್ನು ಷೆಫ್‌ ಆದರ್ಶ್ ತಟಪತಿ ನಡೆಸಿಕೊಟ್ಟರು.
ಸ್ಟ್ಯಾಂಡ್ ಅಪ್‌ ಕಾಮಿಡಿ ಕಾರ್ಯಕ್ರಮವನ್ನು ಮಿಮಿಕ್ರಿ ಗೋಪಿ ನಡೆಸಿಕೊಟ್ಟರು.
ಸ್ಟ್ಯಾಂಡ್ ಅಪ್‌ ಕಾಮಿಡಿ ಕಾರ್ಯಕ್ರಮವನ್ನು ಮಿಮಿಕ್ರಿ ಗೋಪಿ ನಡೆಸಿಕೊಟ್ಟರು.
ಭೂಮಿಕಾ
ಭೂಮಿಕಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT