ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲೆ: ಎಂಟು ವರ್ಷ ಬಳಿಕ ಮತ್ತೊಬ್ಬ ಬಂಧನ

Last Updated 23 ಮೇ 2022, 16:30 IST
ಅಕ್ಷರ ಗಾತ್ರ

ಬೆಂಗಳೂರು: ಆಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ಉದಯ್ ರಾಜಸಿಂಗ್‌ (61) ಎಂಬುವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಮಧು ಅಲಿಯಾಸ್ ಮಧುಸೂದನ್ (27), ಎಂಟು ವರ್ಷಗಳ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

'ಬ್ಯಾಂಕೊಂದರ ನಿವೃತ್ತ ಉದ್ಯೋಗಿ ಆಗಿದ್ದ ಉದಯ್, ಪತ್ನಿ ಸುಶೀಲಾ (57) ಜೊತೆ ಲಕ್ಕಸಂದ್ರದಲ್ಲಿ ವಾಸವಿದ್ದರು. ತಮ್ಮ ಬಳಿ ಇದ್ದ ₹ 18 ಕೋಟಿ ಮೌಲ್ಯದ ವಜ್ರದ ನೆಕ್ಲೇಸ್ ಮಾರಾಟ ಮಾಡಲು ಮುಂದಾಗಿದ್ದರು. ಅದನ್ನು ತಿಳಿದಿದ್ದ ಮಧು ಹಾಗೂ ಇತರೆ ಆರೋಪಿಗಳು, ಗ್ರಾಹಕರ ಸೋಗಿನಲ್ಲಿ 2014ರ ಮಾರ್ಚ್‌ 25ರಂದು ಮನೆಗೆ ನುಗ್ಗಿದ್ದರು. ಸುಶೀಲಾ ಮೇಲೆ ಹಲ್ಲೆ ಮಾಡಿ, ಉದಯ್‌ ಅವರನ್ನು ಕೊಂದಿದ್ದರು. ವಜ್ರದ ನೆಕ್ಲೇಸ್ ಸಮೇತ ಪರಾರಿಯಾಗಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪ್ರಮುಖ ಆರೋಪಿಗಳಾದ ಅಭಿಷೇಕ್, ಶ್ರೀಧರ್ ಸೇರಿದಂತೆ ಆರು ಆರೋಪಿಗಳನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಅವರೆಲ್ಲರಿಗೂ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಆದರೆ, ಮಧು ತಲೆಮರೆಸಿಕೊಂಡು ಓಡಾಡುತ್ತಿದ್ದ. ಇತ್ತೀಚೆಗೆ ಆತನನ್ನು ಬಂಧಿಸಲಾಗಿದೆ. ಈತನ ವಿರುದ್ಧ ಪ್ರತ್ಯೇಕ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು’ ಎಂದೂ ತಿಳಿಸಿವೆ.

‘ಆರೋಪಿಗಳು ಮೈಸೂರು ಹಾಗೂ ಬೆಂಗಳೂರಿನ ಹಲವರ ಬಳಿ ಸಾಲ ಮಾಡಿದ್ದರು. ಅದನ್ನು ತೀರಿಸುವುದಕ್ಕಾಗಿ ಉದಯ್‌ ಅವರನ್ನು ಕೊಂದು ವಜ್ರದ ನೆಕ್ಲೇಸ್ ಕದ್ದಿದ್ದರು. ₹ 18 ಕೋಟಿ ಮೌಲ್ಯದ ನೆಕ್ಲೇಸನ್ನು ಲಂಡನ್‌ನ ಆಭರಣ ವ್ಯಾಪಾರಿಯೊಬ್ಬರಿಗೆ ಮಾರಿದ್ದರು. ಬಂದ ಹಣವನ್ನು ಹಂಚಿಕೊಂಡು, ಸಾಲ ತೀರಿಸಿದ್ದರು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT