ಬುಧವಾರ, ಮೇ 25, 2022
24 °C

'ಕೋವಿಡ್ ಇಲ್ಲ’ ಪ್ರಮಾಣಪತ್ರ ಕಡ್ಡಾಯವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ಏರೊ ಇಂಡಿಯಾ 2021' ಪ್ರದರ್ಶನ ವೀಕ್ಷಿಸಲು ಬರುವ ವ್ಯಕ್ತಿ ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ಕೋವಿಡ್‌ ಸೋಂಕು ಇಲ್ಲ ಎಂಬುದು ದೃಢಪಟ್ಟ ವರದಿ ತೋರಿಸಬೇಕು’ ಎಂಬ ನಿಯಮವನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದಿದೆ. 

‘ಈ ವೈಮಾನಿಕ ಪ್ರದರ್ಶನ ಪ್ರದೇಶವು (ಅಡ್ವ) ವಿಶಾಲವಾಗಿದೆ. ಪ್ರವಾಸಿಗರು ಪರಸ್ಪರ‌ ಅಂತರ ಕಾಪಾಡುವುದಕ್ಕೆ ಅನುಕೂಲಕರವಾಗಿ ಆಸನ ವ್ಯವಸ್ಥೆ ಮಾಡಲಾಗಿದೆ. ವಿಮಾನಗಳ ಪ್ರತಿ ಪ್ರದರ್ಶನವೂ ಎರಡು ಗಂಟೆಗಳ ಅವಧಿಗೆ ಸೀಮಿತ. ಪ್ರದರ್ಶನದ ಪ್ರದೇಶದಲ್ಲಿ ಮಾಸ್ಕ್‌ ಧರಿಸುವುದು, ಸೋಂಕು ನಿವಾರಕದಿಂದ ಕೈತೊಳೆಯುವುದು ಹಾಗೂ ದೇಹದ ಉಷ್ಣಾಂಶ ತಪಾಸಣೆಯನ್ನು ಕಡ್ಡಾಯ ಮಾಡುವ ಮೂಲಕ ಸೋಂಕು ಹರಡದಂತೆ ತಡೆಯಲು ಸಾಕಷ್ಟು ಮುನ್ನೆಚ್ಚರಿಕೆ ವಹಿಸಿರುವುದನ್ನು ಗಮನಿಸಿದ್ದೇವೆ. ಹಾಗಾಗಿ ಪ್ರದರ್ಶನಕ್ಕೆ ಬರುವವರು ಕೋವಿಡ್ ಸೊಂಕು ಹೊಂದಿಲ್ಲ ಎಂಬ ಪ್ರಮಾಣಪತ್ರ ಹೊಂದಿರಬೇಕೆಂಬ ನಿರ್ಬಂಧವನ್ನು ಸಡಿಲಗೊಳಿಸಲಾಗಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶೀ ಜಾವೆದ್ ಅಖ್ತರ್‌ ಗುರುವಾರ ಆದೇಶ ಮಾಡಿದ್ದಾರೆ. ತಾಂತ್ರಿಕ ಸಲಹಾ ಸಮಿತಿಯ ಸಲಹೆ ಆಧಾರದಲ್ಲಿ ಈ ನಿರ್ಧಾರ ತಳೆಯಲಾಗಿದೆ ಎಂದೂ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಕೋವಿಡ್ ಪರೀಕ್ಷೆಯ ವರದಿ ತೋರಿಸುವುದನ್ನು ಕಡ್ಡಾಯ ಮಾಡಿದ್ದರಿಂದ ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಬರುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿತ್ತು. ಎರಡನೆ ದಿನವೂ ಸೀಮಿತ ಸಂಖ್ಯೆಯ ಪ್ರೇಕ್ಷಕರಿದ್ದರು. ಪ್ರತಿ ಬಾರಿಯೂ ಜನರಿಂದ ಗಿಜಿಗುಡುತ್ತಿದ್ದ ಪ್ರದರ್ಶನದ ಪ್ರದೇಶ ಈ ಬಾರಿ ಖಾಲಿ ಹೊಡೆಯುತ್ತಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು