ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನ್ಮದಿನದ ಕಾಣಿಕೆಯನ್ನು ಮಕ್ಕಳ ಶಿಕ್ಷಣಕ್ಕೆ ನೀಡಿದ ಶಿವಾಚಾರ್ಯ ಸ್ವಾಮೀಜಿ

Published 4 ಜುಲೈ 2024, 15:55 IST
Last Updated 4 ಜುಲೈ 2024, 15:55 IST
ಅಕ್ಷರ ಗಾತ್ರ

ಬೆಂಗಳೂರು: ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ತಮ್ಮ ಜನ್ಮದಿನದಿಂದ ಭಕ್ತರು ನೀಡಿದ ಕಾಣಿಕೆಯಿಂದ ಸಂಗ್ರಹವಾಗಿದ್ದ ₹84,000ವನ್ನು ತಂದೆಯ ನಿಧನದಿಂದ ಸಂಕಷ್ಟದಲ್ಲಿರುವ ಮಕ್ಕಳ ಶಿಕ್ಷಣಕ್ಕಾಗಿ ನೀಡಿದ್ದಾರೆ.

ಮಾರತ್‌ಹಳ್ಳಿ ನಿವಾಸಿ ನಾಗಭೂಷಣ ಅಕಾಲಿಕವಾಗಿ ನಿಧನರಾಗಿದ್ದರು. ಇದರಿಂದ ಅವರ ಕುಟುಬ ಸಂಕಷ್ಟಕ್ಕೆ ಸಿಲುಕಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿತ್ತು. ಇದನ್ನು ಮನಗಂಡ ಸ್ವಾಮೀಜಿ, ತಮ್ಮ ಜನ್ಮದಿನದಂದು ಸಂಗ್ರಹವಾದ ಕಾಣಿಕೆಯ ಮೊತ್ತವನ್ನು ನಾಗಭೂಷಣ ಅವರ ಮಗ ಮತ್ತು ಮಗಳ ಶಿಕ್ಷಣದ ವೆಚ್ಚಕ್ಕಾಗಿ ನೀಡಿದ್ದಾರೆ.

‘ಮಕ್ಕಳಾದ ಪ್ರಣವ್‌ ಮತ್ತು ಪ್ರತೀಕ್ಷಾ ವಿದ್ಯಾಭ್ಯಾಸ ಮುಂದುವರಿಸಲು ಆರ್ಥಿಕ ಸಂಕಷ್ಟ ಉಂಟಾಗಿರುವ ಬಗ್ಗೆ ತಾಯಿ ಜ್ಯೋತಿ ನಾಗಭೂಷಣ ಅವರು ತಿಳಿಸಿದ್ದರು. ಅದಕ್ಕೆ ಸ್ವಾಮೀಜಿ ಸ್ಪಂದಿಸಿದರು’ ಎಂದು ಮಠದ ಕಾರ್ಯದರ್ಶಿ ಸಿ. ಬಸವರಾಜು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT