ವಿಮಾನ ದರ ಹೆಚ್ಚಳಕ್ಕೆ ಆಕ್ರೋಶ

7

ವಿಮಾನ ದರ ಹೆಚ್ಚಳಕ್ಕೆ ಆಕ್ರೋಶ

Published:
Updated:

ಬೆಂಗಳೂರು: ನಗರದಿಂದ ಮಂಗಳೂರಿಗೆ  ಆ. 20ರಂದು ಹೋಗುವ ಜೆಟ್‌ ಏರ್‌ವೇಸ್‌ನ ವಿಮಾನ ಪ್ರಯಾಣ ದರವನ್ನು ₹68,545ಕ್ಕೆ (ಒಬ್ಬರಿಗೆ) ಏರಿಕೆ ಮಾಡಲಾಗಿದ್ದು, ಇದಕ್ಕೆ ಟ್ವಿಟರ್‌ನಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ಈ ದರ ₹4,480 ಇರುತ್ತಿತ್ತು. ಏರಿಕೆಯನ್ನು ಖಂಡಿಸಿ ಟ್ವೀಟ್‌ ಮಾಡಿರುವ ಹಲವರು, ‘ಮಂಗಳೂರಿನಲ್ಲಿ ಪ್ರವಾಹ ಸ್ಥಿತಿ ಇದೆ. ಜನರು ಕಷ್ಟದಲ್ಲಿ ಸಿಲುಕಿದ್ದು, ಅವರನ್ನು ರಕ್ಷಿಸಲೆಂದು ಹಲವರು ಬೆಂಗಳೂರಿನಿಂದ ಹೋಗುತ್ತಿದ್ದಾರೆ. ಇದೇ ಸಂದರ್ಭದಲ್ಲೇ ವಿಮಾನದ ದರ ಏರಿಕೆ ಮಾಡಿರುವುದು ಖಂಡನೀಯ’ ಎಂದು ಟೀಕಿಸಿದ್ದಾರೆ.

‘ಸತತ ಮಳೆ, ಗುಡ್ಡ ಕುಸಿತದ ಕಾರಣ ಮಂಗಳೂರು ಹಾಗೂ ಸುತ್ತಮುತ್ತ ಊರುಗಳಿಗೆ ಬಸ್‌ಗಳ ಸಂಚಾರ ಕಡಿಮೆ ಆಗಿದೆ. ಅದನ್ನೇ ಬಂಡವಾಳ ಮಾಡಿಕೊಂಡಿರುವ ವಿಮಾನ ಕಂಪನಿಗಳು, ದುಡ್ಡು ಮಾಡುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !