ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವದ್ಗೀತೆ ಪಠಣದಲ್ಲಿ ದಾಖಲೆ

Last Updated 6 ಸೆಪ್ಟೆಂಬರ್ 2021, 16:55 IST
ಅಕ್ಷರ ಗಾತ್ರ

ಬೆಂಗಳೂರು: ಐದನೇವಯಸ್ಸಿನಲ್ಲಿಯೇ ಭಗವದ್ಗೀತೆಯ 74ಕ್ಕೂ ಹೆಚ್ಚು ಶ್ಲೋಕಗಳನ್ನು ಹೇಳುವ ಮೂಲಕ ಅಕ್ಷೋಭ್ಯ ಕುಲಕರ್ಣಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌‘ ಗೌರವಕ್ಕೆ ಪಾತ್ರನಾಗಿದ್ದಾನೆ.

ನಗರದ ವಿಜಯಕುಮಾರ್ ಕುಲಕರ್ಣಿ ಮತ್ತು ರಂಜಿತಾ ದಂಪತಿಯ ಪುತ್ರನಾದ ಅಕ್ಷೋಭ್ಯ ಆಗಸ್ಟ್‌ 9ರಂದು ಈ ಗೌರವಕ್ಕೆ ಪಾತ್ರನಾಗಿದ್ದಾನೆ. ಚಿಕ್ಕ ವಯಸ್ಸಿನಲ್ಲಿಯೇ (5 ವರ್ಷ, 6 ತಿಂಗಳು, 29 ದಿನ) ಗರಿಷ್ಠ ಶ್ಲೋಕಗಳನ್ನು ಹೇಳಿದ, ನೆನಪಿಟ್ಟುಕೊಂಡಿರುವ ಸಾಧನೆಗೆ ದಾಖಲೆಯ ಪಟ್ಟಿ ಸೇರಿದ್ದಾನೆ.

ಎರಡೂವರೆ ವರ್ಷದವನಿದ್ದಾಗಿನಿಂದ ಭಗವದ್ಗೀತೆಯ ಶ್ಲೋಕಗಳನ್ನು ಆಲಿಸುತ್ತಿರುವ ಅಕ್ಷೋಭ್ಯ, ಈಗ (5 ವರ್ಷ 9 ತಿಂಗಳು) ಭಗವದ್ಗೀತೆಯ 330ಕ್ಕೂ ಹೆಚ್ಚು ಶ್ಲೋಕಗಳನ್ನು ಹೇಳುತ್ತಾನೆ. ಸದ್ಯ ಅರುಂಧತಿ ಗುರುಕುಲ ಶಾಲೆಯಲ್ಲಿ ಅಕ್ಷೋಭ್ಯ ಓದುತ್ತಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT