ಬೆಂಗಳೂರು: ‘ಪತ್ನಿಯ ಕಿರುಕುಳದಿಂದ ಬೇಸತ್ತಿದ್ದೇನೆ’ ಎಂದು ಮರಣಪತ್ರದಲ್ಲಿ ಉಲ್ಲೇಖಿಸಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಲದೇವನಹಳ್ಳಿಯ ಸಿಲುವೆಪುರ ನಿವಾಸಿ ಬಾಲರಾಜ್(42) ಅವರು ನ.19ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಸಾಫ್ಟ್ವೇರ್ ಎಂಜಿನಿಯರ್, ಉತ್ತರ ಪ್ರದೇಶದ ನಿವಾಸಿ ಅತುಲ್ ಸುಭಾಷ್ ಅವರು ಡಿ.9ರಂದು ಹಾಗೂ ಹೆಡ್ಕಾನ್ಸ್ಟೆಬಲ್ ತಿಪ್ಪಣ್ಣ ಅವರು ಡಿ.14ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ನಿ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಇಬ್ಬರೂ ಮರಣ ಪತ್ರದಲ್ಲಿ ಉಲ್ಲೇಖಿಸಿದ್ದರು. ಬಾಲರಾಜ್ ಅವರೂ ಅದೇ ಮಾದರಿಯಲ್ಲಿ ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಇದೀಗ ಬಯಲಾಗಿದೆ.

ಸೋಲದೇವನಹಳ್ಳಿ ಠಾಣೆಯಲ್ಲಿ ಬಾಲರಾಜ್ ಅವರು ಪತ್ನಿ ಕುಮಾರಿ ಎಂಬುವವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದಡಿ ಪ್ರಕರಣ ದಾಖಲಾಗಿದೆ.

‘ಬಾಲರಾಜ್ ಹಾಗೂ ಕುಮಾರಿ 14 ವರ್ಷದ ಹಿಂದೆ ಮದುವೆ ಆಗಿದ್ದರು. ದಂಪತಿಗೆ 12 ವರ್ಷದ ಮಗ ಇದ್ದಾನೆ. ಬಾಲರಾಜ್ ಅವರು ಗಾರೆ ಕೆಲಸ ಮಾಡುತ್ತಿದ್ದರು. ದಂಪತಿ ಹೆಸರಘಟ್ಟ ಸಮೀಪದ ಸಿಲುವೆಪುರದಲ್ಲಿ ನೆಲಸಿದ್ದರು. ದಂಪತಿ ಮಧ್ಯೆ ಕೌಟುಂಬಿಕ ವಿಚಾರಕ್ಕೆ ಗಲಾಟೆ ನಡೆದು, ಪ್ರತ್ಯೇಕವಾಗಿ ನೆಲಸಿದ್ದರು. ಅದರಿಂದ ಬೇಸತ್ತು ಬಾಲರಾಜ್ ಅವರು ಮರಣಪತ್ರ ಬರೆದಿಟ್ಟು ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು’ ಎಂದು ಮೂಲಗಳು ಹೇಳಿವೆ.

‘ಆರು ತಿಂಗಳ ಹಿಂದೆ ಪತ್ನಿಯ ಜತೆಗೆ ರಾಜಿ ಸಂಧಾನ ಮಾಡುವುದಾಗಿ ಕರೆಸಿಕೊಂಡಿದ್ದ ಹಿರಿಯರು, ಪತ್ನಿಯ ಕಾಲಿಗೆ ಬೀಳಿಸಿದ್ದರು. ಇದರಿಂದ ನೋವಾಗಿತ್ತು. ಆಕೆಯೂ ತನಗೆ ಕಿರುಕುಳ ನೀಡಿದ್ದಾಳೆ. ಅಲ್ಲದೇ, ಅಂದು ರಾಜಿ ಸಂಧಾನ ಸಭೆಯಲ್ಲಿ ಪಾಲ್ಗೊಂಡಿದ್ದವರೂ ಮೋಸ ಮಾಡಿದ್ದಾರೆ’ ಎಂದು ಬಾಲರಾಜ್ ಅವರು ಮರಣಪತ್ರದಲ್ಲಿ ಉಲ್ಲೇಖಿಸಿದ್ದರು.

‘ಕನಕಪುರದ ಕುಮಾರಿ ಅವರು 16 ವರ್ಷಗಳ ಹಿಂದೆ ಸಂಬಂಧಿ ಯುವಕನನ್ನು ಮದುವೆ ಆಗಿದ್ದರು. ಆದರೆ, ಕೌಟುಂಬಿಕ ಕಾರಣಕ್ಕೆ ಪತಿಗೆ ವಿಚ್ಛೇದನ ನೀಡಿದ್ದರು. ಅದಾದ ಮೇಲೆ ಬಾಲರಾಜ್ ಅವರ ಪರಿಚಯವಾಗಿತ್ತು. ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದರು. ಮೊದಲನೇ ಮದುವೆ ವಿಚಾರವನ್ನು ಕುಮಾರಿ ಅವರು ಬಾಲರಾಜ್ ಅವರ ಕುಟುಂಬಸ್ಥರಿಗೆ ತಿಳಿಸಿರಲಿಲ್ಲ. ಕೆಲವು ದಿನಗಳ ಹಿಂದೆ ಈ ಗೊತ್ತಾದ ಮೇಲೆ ಜಗಳ ಆರಂಭವಾಗಿತ್ತು. ದಂಪತಿ ಪ್ರತ್ಯೇಕವಾಗಿ ನೆಲಸಿದ್ದರು‘ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.