ಬೆಂಗಳೂರು: ಅಂಬರೀಷ್ ರಸ್ತೆ ನಾಮಕರಣ, ಅವರ ಪ್ರತಿಮೆ ಹಾಗೂ ಪ್ರತಿಷ್ಠಾನದ ಉದ್ಘಾಟನೆ ಮಾರ್ಚ್ 27ರಂದು ನಡೆಯಲಿದೆ.
ಆನಂದರಾವ್ ವೃತ್ತದಿಂದ ಆರ್.ಸಿ. ಕಾಲೇಜ್‌ವರೆಗಿನ (ರೇಸ್‌ಕೋರ್ಸ್) ರಸ್ತೆಗೆ ಅಂಬರೀಷ್ ರಸ್ತೆ ಎಂದು ಹೆಸರಿಸಲಾಗುವುದು. ಸಂಜೆ 5 ಗಂಟೆಗೆ ರೇಸ್‌ಕೋರ್ಸ್ ಜಂಕ್ಷನ್‌ನಲ್ಲಿ ಅಂಬರೀಷ್ ಅವರ ಪ್ರತಿಮೆ ಅನಾವರಣ ನಡೆಯಲಿದೆ. ಸಂಜೆ 6 ಗಂಟೆಗೆ ಕಂಠೀರವ ಸ್ಟುಡಿಯೋ ಆವರಣದಲ್ಲಿ ಅಂಬರೀಷ್ ಸ್ಮಾರಕ ಹಾಗೂ ಪ್ರತಿಷ್ಠಾನದ ಉದ್ಘಾಟನೆ ನಡೆಯಲಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೌಶಲಾಭಿವೃದ್ಧಿ, ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಎಂ. ರಾಜೀವ್ ಚಂದ್ರಶೇಖರ್, ಸಂಸದರಾದ ಡಿ.ವಿ. ಸದಾನಂದಗೌಡ, ಸುಮಲತಾ ಅಂಬರೀಷ್, ಸಚಿವ ಕೆ. ಗೋಪಾಲಯ್ಯ, ಅಂಬರೀಷ್ ಪ್ರತಿಷ್ಠಾನದ ಸದಸ್ಯ, ನಟ ಅಭಿಷೇಕ್ ಅಂಬರೀಷ್ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾಮ ಹರೀಶ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.