ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಅಮೃತ್ ಅವರಿಗೆ ಚೆನ್ನೈಯ 'ರಾಜಂ ವೈದ್ಯರತ್ನಂ ಸಂಗೀತ ಗುರು' ಪ್ರಶಸ್ತಿ

Last Updated 1 ಜನವರಿ 2022, 7:47 IST
ಅಕ್ಷರ ಗಾತ್ರ

ಬೆಂಗಳೂರು: ಚೆನ್ನೈಯ ಪ್ರತಿಷ್ಠಿತ ಕಾರ್ತಿಕ್ ಫೈನ್ ಆರ್ಟ್ಸ್‌‌ನ 47ನೇ ವರ್ಷದ ಸಂಗೀತ ಉತ್ಸವ ಪ್ರಯುಕ್ತ ವಿವಿಧ ಸಾಧಕರಿಗೆ ದತ್ತಿ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಬೆಂಗಳೂರಿನ ಖಂಜಿರವಾದಕ ಅಮೃತ್ ಖಂಜಿರ ಅವರು ತಾಳವಾದ್ಯ ವಿಭಾಗದಲ್ಲಿ 'ರಾಜಂ ವೈದ್ಯರತ್ನಂ ಸಂಗೀತ ಗುರು' ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜ.2ರಂದು ಭಾನುವಾರ ಸಂಜೆ ಕಾರ್ತಿಕ್ ಫೈನ್ ಆರ್ಟ್ಸ್ ಅಧ್ಯಕ್ಷ ಕೆ.ಎಂ.ನರಸಿಂಹನ್ ಅವರು ಚೆನ್ನೈಯ ಭಾರತೀಯ ವಿದ್ಯಾಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಮೃತ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಖಂಜಿರಕ್ಕೆ ಆದ್ಯತೆ ದೊರಕಿಸಿದ್ದಲ್ಲದೆ, ಸೋಲೋ ಖಂಜಿರ ಕಛೇರಿಗಳನ್ನು ನಡೆಸಿ ಪ್ರಸಿದ್ಧರಾಗಿದ್ದು, ಹಲವು ಶಿಷ್ಯರನ್ನು ರೂಪಿಸುತ್ತಿದ್ದಾರೆ.

ಭಾನುವಾರ ನಡೆಯುವ ಕಾರ್ಯಕ್ರಮದಲ್ಲಿ, ಕರ್ನಾಟಕ ಶಾಸ್ತ್ರೀಯ ಸಂಗೀತದ ಮೇರು ಕಲಾವಿದರ ಹೆಸರಿನಲ್ಲಿ ನೀಡಲಾಗುವ ಇತರ ದತ್ತಿ ಪ್ರಶಸ್ತಿಗಳನ್ನೂ ಪ್ರದಾನ ಮಾಡಲಾಗುತ್ತದೆ. ಗಾಯಕಿ ಪ್ರಣತಿ ಗಣಪುರಂ ಅವರಿಗೆ ಡಿ.ಕೆ.ಪಟ್ಟಮ್ಮಾಳ್ ಪುರಸ್ಕಾರ, ವಯಲಿನ್ ವಾದಕ ವಿ.ಎಸ್.ಕೆ.ಚಕ್ರಪಾಣಿ ಅವರಿಗೆ ಪದ್ಮಶ್ರೀ ಡಾ.ಸಿರ್ಕಳಿ ಗೋವಿಂದರಾಜನ್ ಸ್ಮಾರಕ ಪ್ರಶಸ್ತಿ, ಮೃದಂಗವಾದಕ ಬಿ.ಶಿವರಾಮನ್ ಅವರಿಗೆ ಗುರು ಕಾರೈಕುಡಿ ಮಣಿ ಪ್ರಶಸ್ತಿ, ವಯಲಿನ್ ವಾದಕಿಯರು, ಅಯ್ಯರ್ ಸಹೋದರಿಯರಾದ ಡಾ.ಶ್ರೀವಿದ್ಯಾ ಮತ್ತು ಸುಧಾ ಅವರಿಗೆ ಎ.ಜಿ.ಗುರುಸ್ವಾಮಿ ಸ್ಮಾರಕ ಪ್ರಶಸ್ತಿ, ಗಾಯಕಿ ಬಿ.ವಿಜಯಲಕ್ಷ್ಮಿ ಅವರಿಗೆ ರಾಜಂ ವೈದ್ಯನಾಥನ್ ಸಂಗೀತ ಗುರು ಪ್ರಶಸ್ತಿಯನ್ನು ನೀಡಲಾಗುತ್ತದೆ.

ಇವರೊಂದಿಗೆ, ಘಟಂ ವಿದ್ವಾನ್ ಎಸ್.ಕೃಷ್ಣ ಅವರಿಗೆ ಉಮಾ ಸ್ಮಾರಕ ಪ್ರಶಸ್ತಿ, ಕಿದಂಬಿ ನಾರಾಯಣನ್ ಅವರಿಗೆ ಆರ್.ವೇದವಲ್ಲಿ ಸ್ಮಾರಕ ಪ್ರಶಸ್ತಿ, ವಯಲಿನ್ ಕಲಾವಿದೆ ದೀಪಿಕಾ ಮತ್ತು ಆಡುತುರೈ ಗುರುಪ್ರಸಾದ್ ಅವರಿಗೆ ಪಾಪನಾಶನಂ ಶಿವನ್ ಪ್ರಶಸ್ತಿ, ನಾಟ್ಯ ಕಲಾವಿದೆ ಕೃತಿಕಾ ಸುಬ್ರಹ್ಮಣ್ಯನ್‌ಗೆ ನೃತ್ಯಜ್ಯೋತಿ ಪ್ರಶಸ್ತಿ, ಕಥಕ್ ಕಲಾವಿದೆ ಜಿಗ್ಯಾಸಾ ಗಿರಿ ಅವರಿಗೆ ಮದುರೈ ಎನ್.ಕೃಷ್ಣನ್ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT