ಉರುಸ್‌ನಲ್ಲಿ ಅಶ್ವತ್ಥನಾರಾಯಣ ಭಾಗಿ

ಬೆಂಗಳೂರು: ಮಲ್ಲೇಶ್ವರದ ಬಾಂಧವ್ಯ ನಗರದ ಪಾರ್ಸಿ ಗಾರ್ಡನ್‌ನಲ್ಲಿ ಮುಸ್ಲಿಮರು ಸೋಮವಾರ ಆಯೋಜಿಸಿದ್ದ ಸಂದಲ್ ಉರುಸ್‌ನಲ್ಲಿ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಪಾಲ್ಗೊಂಡಿದ್ದರು.
‘ಭಾರತದಲ್ಲಿ ನೂರಾರು ಸಮುದಾಯಗಳು, ಹತ್ತಾರು ಧರ್ಮಗಳು ಸಾವಿರಾರು ವರ್ಷಗಳಿಂದಲೂ ಸೌಹಾರ್ದದಿಂದ ಬದುಕುತ್ತಿವೆ. ಈ ವಾತಾವರಣವು ಸಮಾಜದಲ್ಲಿ ಶಾಂತಿಗೆ ಕಾರಣವಾಗಿದ್ದು, ಸಮೃದ್ಧಿ ತಂದಿದೆ’ ಎಂದು ಸಚಿವರು ಹೇಳಿದರು.
‘ಸಂಸ್ಕೃತಿ, ಸಂಪ್ರದಾಯಗಳನ್ನು ಸಮುದಾಯಗಳು ಪರಸ್ಪರ ಗೌರವಿಸಬೇಕು. ಎಲ್ಲರೂ ಕೊಡುಕೊಳ್ಳುವಿಕೆಯ ತತ್ವ ಆಧರಿಸಿ ಬದುಕಬೇಕು’ ಎಂದು ಆಶಿಸಿದರು.
‘ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟ. ನಮ್ಮಲ್ಲಿ ಎಂದೂ ಆಕ್ರಮಣಶೀಲತೆ ಕಂಡುಬಂದಿಲ್ಲ. ಇಲ್ಲಿ ಯಾರೂ ಪ್ರತ್ಯೇಕತೆಯ ಭಾವನೆಯನ್ನು ಎಂದಿಗೂ ಬೆಳೆಸಿಕೊಂಡಿಲ್ಲ. ನಮ್ಮಲ್ಲಿನ ಧರ್ಮ, ಭಕ್ತಿ ಚಳವಳಿಗಳ ಪ್ರಭಾವವೂ ಈ ನೆಲದಲ್ಲಿದೆ. ಸಹಿಷ್ಣುತೆಯಿಂದಾಗಿ ರಾಜ್ಯವು ಇಂದು ಮೇಲ್ಪಂಕ್ತಿಯಲ್ಲಿದೆ’ ಎಂದರು.
ಬಿಬಿಎಂಪಿ ಮಾಜಿ ಸದಸ್ಯೆ ಹೇಮಲತಾ ಕೇಶವ, ಬಿಜೆಪಿ ಮುಖಂಡರಾದ ಶಕೀಲ್ ಅಹಮದ್, ಕೇಶವಮೂರ್ತಿ, ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.