ಬೆಂಗಳೂರು: ನಗರದಲ್ಲಿ ಶುಕ್ರವಾರ ವಿಜಯನಗರದ ಎಂಸಿ ಲೇಔಟ್ ಬಳಿ ಆಟೊ ಮೇಲೆ ಮರ ಬಿದ್ದು, ಚಾಲಕ ಮೃತಪಟ್ಟಿದ್ದಾರೆ. ಎಂ.ಸಿ.ಲೇಔಟ್‌ನ ಶಿವರುದ್ರಯ್ಯ (49) ಮೃತಪಟ್ಟವರು.
ಶಿವರುದ್ರಯ್ಯ ಅವರ ತಲೆ, ಕಾಲಿಗೆ ತೀವ್ರ ಪೆಟ್ಟಾಗಿತ್ತು. ಸ್ಥಳಕ್ಕೆ ಧಾವಿಸಿದ ಬಿಬಿಎಂಪಿ ಅಧಿಕಾರಿಗಳು ಅವರನ್ನು ಸಮೀಪದ ಆಸ್ಪತ್ರೆಗೆ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದರು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ.
ನಿಯಮಾವಳಿಗಳ ಮೃತನ ಕುಟುಂಬ ಸದಸ್ಯರಿಗೆ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ. 12 ರಂದು ಸರ್ವಜ್ಞ ನಗರದ ಜೈ ಭಾರತ್ ನಗರದಲ್ಲಿ ಮರ ಬಿದ್ದು ನಾಲ್ವರು ಶಾಲಾ ಮಕ್ಕಳು ಸೇರಿ 6 ಮಂದಿ ಗಾಯಗೊಂಡಿದ್ದರು.