ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಫ್ರೀಡಂ ಹೆಲ್ದಿ ಆಯಿಲ್ಸ್‌ನಿಂದ ಜಾಗೃತಿ ಅಭಿಯಾನ

Published 28 ಮೇ 2024, 17:40 IST
Last Updated 28 ಮೇ 2024, 17:40 IST
ಅಕ್ಷರ ಗಾತ್ರ

ಬೆಂಗಳೂರು: ಖಾದ್ಯ ತೈಲ ಪ್ರಮಾಣ ಕುರಿತು ಗ್ರಾಹಕರಿಗೆ ಅರಿವು ಮೂಡಿಸಲು ಫ್ರೀಡಂ ಹೆಲ್ದಿ ಕುಕಿಂಗ್ ಆಯಿಲ್ಸ್‌ನಿಂದ ‘ನೀವು ಸರಿಯಾಗಿ ಖರೀದಿಸುತ್ತಿದ್ದೀರಾ?’ ಎಂಬ ಹೊಸ ಅಭಿಯಾನ ಆರಂಭಿಸಲಾಗಿದೆ.

ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ನಿಯಮಾವಳಿ ಪ್ರಕಾರ ಪ್ರತಿ ಒಂದು ಲೀಟರ್‌ ಪ್ಯಾಕೆಟ್‌ನಲ್ಲಿ 910 ಗ್ರಾಂ ಸೂರ್ಯಕಾಂತಿ ಎಣ್ಣೆ ಇರಬೇಕಿದೆ. ಆದರೆ, ಮಾರುಕಟ್ಟೆಯಲ್ಲಿ ಕೆಲವು ಬ್ರ್ಯಾಂಡ್‌ಗಳು ಕಡಿಮೆ ಪ್ರಮಾಣದ (850ರಿಂದ 870 ಗ್ರಾಂ) ಖಾದ್ಯ ತೈಲವನ್ನು ಮಾರಾಟ ಮಾಡುತ್ತವೆ. ಹಾಗಾಗಿ, ಈ ಅಭಿಯಾನ ಆರಂಭಿಸಲಾಗಿದೆ ಎಂದು ಜೆಮಿನಿ ಎಡಿಬಲ್ಸ್ ಆ್ಯಂಡ್‌ ಫ್ಯಾಟ್ಸ್‌ ಇಂಡಿಯಾ ಲಿಮಿಟೆಡ್‌ ತಿಳಿಸಿದೆ.

‘ಈ ಅಭಿಯಾನವು ಗ್ರಾಹಕರ ಸಬಲೀಕರಣಕ್ಕಾಗಿ ಕಂಪನಿ ಹೊಂದಿರುವ ಬದ್ಧತೆಗೆ ಕನ್ನಡಿ ಹಿಡಿದಿದೆ. ಗ್ರಾಹಕರಿಗೆ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ನೆರವಾಗಲಿದೆ’ ಎಂದು ಕಂಪನಿಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಹಿರಿಯ ಉಪಾಧ್ಯಕ್ಷ ಪಿ. ಚಂದ್ರ‌ಶೇಖರ ರೆಡ್ಡಿ ಹೇಳಿದ್ದಾರೆ.

‘ಗ್ರಾಹಕರು ಯಾವುದೇ ಬ್ರ್ಯಾಂಡ್‌ನ ಸೂರ್ಯಕಾಂತಿ ಎಣ್ಣೆ ಖರೀದಿಸುವ ಮೊದಲು ಪ್ಯಾಕೆಟ್‌ನಲ್ಲಿರುವ ಖಾದ್ಯ ತೈಲದ ಪ್ರಮಾಣವನ್ನು ಪರಿಶೀಲಿಸಬೇಕಿದೆ. ಫ್ರೀಡಂ ಹೆಲ್ದಿ ಕುಕಿಂಗ್‌ ಆಯಿಲ್ಸ್‌ ಪ್ಯಾಕೆಟ್‌ನಲ್ಲಿ ಸರ್ಕಾರ ನಿಗದಿಪಡಿಸಿರುವ ಮಾನದಂಡದ ಅನ್ವಯ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ ಇರುತ್ತದೆ’ ಎಂದು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT