ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಮಂದಿರ: ಎರಡೂವರೆ ಸಾವಿರ ಕುಟುಂಬಗಳಿಗೆ ಫಲತಾಂಬೂಲ

Published 22 ಜನವರಿ 2024, 21:42 IST
Last Updated 22 ಜನವರಿ 2024, 21:42 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಯ ಅಂಗವಾಗಿ ಕಗ್ಗಲೀಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಸ್.ಪರ್ವೀಜ್ ಅವರು ಎರಡೂವರೆ ಸಾವಿರ ಕುಟುಂಬಗಳಿಗೆ ಅರಿಶಿಣ, ಕುಂಕುಮ, ಎಲೆ ಅಡಿಕೆ, ಫಲ ತಾಂಬೂಲ ನೀಡಿದರು. ಜೊತೆಗೆ ತಿರುಪತಿಯ ಲಡ್ಡು ವಿತರಿಸಿದರು.

ಕಾರ್ಯಕ್ರಮದ ಅಂಗವಾಗಿ, ಕೆ.ಎಸ್.ಪರ್ವೀಜ್ ಅವರ ಕಚೇರಿಯ ಮುಂಭಾಗ ಶ್ರೀರಾಮ, ಆರ್ಟ್ ಆಫ್ ಲಿವಿಂಗ್‍ನ ಶ್ರೀರವಿಶಂಕರ್ ಗುರೂಜಿ, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಜಿ ಅವರ ಕಟ್‍ಔಟ್ ಅಳವಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಎಸ್‌.ಟಿ.ಸೋಮಶೇಖರ್‌, ‘ಭಾರತೀಯರಾದ ನಾವೆಲ್ಲರೂ ಸಹೋದರರು, ಎಲ್ಲ ವರ್ಗ, ಧರ್ಮಿಯರು ಒಗ್ಗೂಡಿ ಜೀವನ ಸಾಗಿಸುತ್ತೇವೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿ’ ಎಂದು ಬಣ್ಣಿಸಿದರು.

ಆರ್ಟ್ ಆಫ್ ಲಿವಿಂಗ್‍ನ ಶ್ರೀಶ್ರೀರವಿಶಂಕರ್ ಗುರೂಜಿ ಅವರ ಸಹೋದರಿ ಭಾನುಮತಿ ನರಸಿಂಹನ್, ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೆ.ಜಿ. ರಾಜಣ್ಣ, ಪಟೇಲ್‍ ಕೃಷ್ಣಪ್ಪ, ಸೋಮನಹಳ್ಳಿ ಪುಟ್ಟೆಗೌಡ, ಷಣ್ಮುಖ, ಜಯರಾಮು, ಫಾದರ್ ಅ. ಥಾಮಸ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಹದೇವ್, ಯಶೋದಾ ರವಿ, ಗೋವಿಂದಸ್ವಾಮಿ, ಮುನಿರಾಜು, ಶಂಕರ್‌ಲಾಲ್‌, ನಾಗರಾಜು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT