ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಾಲಿಟಿ ಷೋಗಳಲ್ಲಿ ಮೊದಲೇ ವಿಜೇತರ ನಿರ್ಧಾರ: ಹಿರಿಯ ಗಾಯಕಿ ಬಿ.ಕೆ.ಸುಮಿತ್ರಾ

Last Updated 5 ಅಕ್ಟೋಬರ್ 2019, 16:15 IST
ಅಕ್ಷರ ಗಾತ್ರ

ಬೆಂಗಳೂರು: ‘ಟಿ.ವಿ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಕೆಲವು ಸಂಗೀತ ರಿಯಾಲಿಟಿ ಷೋಗಳಲ್ಲಿ ವಿಜೇತರುಯಾರು ಎಂಬುದುಮೊದಲೇ ನಿರ್ಧಾರವಾಗಿರುತ್ತದೆ’ ಎಂದು ಹಿರಿಯ ಹಿನ್ನೆಲೆ ಗಾಯಕಿ ಬಿ.ಕೆ.ಸುಮಿತ್ರಾ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಶನಿವಾರ ಆಯೋಜಿಸಿದ್ದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇಂಥವರೇ ಗೆಲ್ಲಬೇಕು ಎಂದು ಕಾರ್ಯಕ್ರಮದ ಪ್ರಾರಂಭದಲ್ಲಿಯೇ ನಿರ್ಧಾರವಾಗಿರುತ್ತದೆ. ಈಗ ಇಂತಹ ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿ ಹೋಗುವುದನ್ನೇ ನಿಲ್ಲಿಸಿದ್ದೇನೆ’ ಎಂದು ತಿಳಿಸಿದರು.

‘ಐದಾರು ಹಾಡು ಕಲಿತು ಇಂತಹ ಕಾರ್ಯಕ್ರಮಗಳಿಗೆ ಬರುತ್ತಾರೆ. ಸ್ವಂತಿಕೆ ಇರುವುದಿಲ್ಲ. ಶಾಸ್ತ್ರೀಯವಾಗಿ ಸಂಗೀತ ಅಭ್ಯಾಸ ಮಾಡಿರುವುದಿಲ್ಲ. ಪ್ರತಿಭಾವಂತರಿದ್ದರೂ ಕೆಲವೊಮ್ಮೆ ಅವರಿಗೆ ಗೆಲುವು ಸಿಗುವುದಿಲ್ಲ. ಜಾತಿ–ಮತ, ಹಿನ್ನೆಲೆ ನೋಡಿ ವಿಜೇತರನ್ನು ಆಯ್ಕೆ ಮಾಡಲಾಗುತ್ತಿದೆ. ಅರ್ಹ ಪ್ರತಿಭಾವಂತರು ಗೆಲ್ಲುವಂತಾಗಬೇಕು’ ಎಂದು ಹೇಳಿದರು.

‘ನಮ್ಮ ಮಗ ಅಥವಾ ಮಗಳು ಒಂದು ಹಾಡು ಹಾಡಲು ಎರಡೂವರೆ ಸಾವಿರ ರೂಪಾಯಿ ಕೊಡುತ್ತೀರಾ ಎಂದು ಪೋಷಕರೇ ಕೇಳುತ್ತಾರೆ. ಇಂತಹ ವಾತಾವರಣದಲ್ಲಿ ಮಕ್ಕಳನ್ನು ಬೆಳೆಸುವುದು ಮುಂದೆ ಪೋಷಕರಿಗೇ ಕಷ್ಟವಾಗಬಹುದು’ ಎಂದು ಸುಮಿತ್ರಾ ಅಭಿಪ್ರಾಯಪಟ್ಟರು.

‘ಶಾಸ್ತ್ರೀಯ ಸಂಗೀತ ಎಲ್ಲದಕ್ಕೂ ಅಡಿಪಾಯ. ಜ್ಯೂನಿಯರ್‌, ಸೀನಿಯರ್‌ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಸಂಗೀತ ಕ್ಷೇತ್ರ ಪ್ರವೇಶಿಸಬೇಕು. ಆಗ ಗಾಯಕರಲ್ಲಿ ಸ್ವಂತಿಕೆ ಬರಲು ಸಾಧ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT