ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವು ಅಲಿಯಾಸ್ ಶಿವಕುಮಾರ್ ಕೊಲೆ ಪ್ರಕರಣದ ಐದನೇ ಆರೋಪಿ, ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರನ್ನು ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು, ಗುರುವಾರ ರಾತ್ರಿ ಬಂಧಿಸಿದರು.

ನಿರೀಕ್ಷಣಾ ಜಾಮೀನು ಕೋರಿ ಎರಡನೇ ಬಾರಿಗೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದ್ದ ರಿಂದ ಜಾಮೀನಿಗಾಗಿ ಬೈರತಿ ಬಸವರಾಜ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಸುಪ್ರೀಂ ಕೋರ್ಟ್ನಲ್ಲೂ ಜಾಮೀನು ಅರ್ಜಿ ಗುರುವಾರ ಬೆಳಿಗ್ಗೆ ವಜಾಗೊಂಡಿತ್ತು. ಅದರ ಬೆನ್ನಲ್ಲೇ ಶಾಸಕರ ಬಂಧನಕ್ಕೆ ಸಿಐಡಿ ವಿಶೇಷ ತಂಡಗಳು ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಲ್ಲದೆ, ಬೆಂಗಳೂರು ಹೊರವಲಯದಲ್ಲಿ ಹುಡುಕಾಟ ನಡೆಸಿದ್ದವು.

ಅಹಮದಾಬಾದ್ನಿಂದ ವಿಮಾನದ ಮೂಲಕ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೈರತಿ ಬಸವರಾಜ ಅವರು ಬರುತ್ತಿರುವ ಮಾಹಿತಿ ತಿಳಿದಿದ್ದ ಸಿಐಡಿ ಪೊಲೀಸರು, ದೇವನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಎಸಿಪಿ ಹರ್ಷ ಅವರ ನೇತೃತ್ವದಲ್ಲಿ ಪೊಲೀಸರು, ವಿಮಾನ ನಿಲ್ದಾಣದ ಟರ್ಮಿನಲ್–1ರಲ್ಲಿ ಕಾದಿದ್ದರು. ವಿಮಾನದಿಂದ ಇಳಿದು ಹೊರಕ್ಕೆ ಬರುತ್ತಿದ್ದಂತೆಯೇ ಆರೋಪಿ ಯನ್ನು ಪೊಲೀಸರು ವಶಕ್ಕೆ ಪಡೆದು ಸಿಐಡಿ ಕಚೇರಿಗೆ ಕರೆ ತಂದು, ತನಿಖಾಧಿಕಾರಿಗೆ ಹಸ್ತಾಂತರಿಸಿದರು ಎಂದು ಮೂಲಗಳು ತಿಳಿಸಿವೆ.

ಕಚೇರಿಯಲ್ಲಿ ವಿಚಾರಣೆ: ಬೈರತಿ ಅವರನ್ನು ಪ್ರಾಥಮಿಕ ವಿಚಾರಣೆ ನಡೆಸಿದ ಸಿಐಡಿ ಪೊಲೀಸರು, ಹೇಳಿಕೆ ದಾಖಲಿಸಿಕೊಂಡರು. ಬೈರತಿ ಅವರನ್ನು ಹೆಚ್ಚಿನ ವಿಚಾರಣೆಗೆ ತಮ್ಮ ಕಸ್ಟಡಿಗೆ ಪಡೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಶಾಸಕರ ಮೇಲಿರುವ ಆರೋಪ ಏನು?

‘ಬೈರತಿ ಬಸವರಾಜ ಅವರ ಕುಮ್ಮಕ್ಕಿನಿಂದ ಕೊಲೆ ನಡೆದಿದೆ’ ಎಂದು ಬಿಕ್ಲು ಶಿವು ಅವರ ತಾಯಿ ವಿಜಯಲಕ್ಷ್ಮಿ ನೀಡಿದ ದೂರು ಆಧರಿಸಿ ಎಫ್ಐಆರ್ ದಾಖಲಾಗಿತ್ತು.

‘ಕಿತ್ತಗನೂರು ಬಳಿ, ಪುತ್ರ ಶಿವಪ್ರಕಾಶ್ ಜಮೀನು ಖರೀದಿಸಿದ್ದ. ಅವನ ಹೆಸರಿನಲ್ಲಿ ಜಿಪಿಎ ಸಹ ಮಾಡಿಸಿಕೊಂಡಿದ್ದ. ಆ ಜಾಗದಲ್ಲಿ ಶೆಡ್ ನಿರ್ಮಿಸಿ, ಜ್ಯೋತಿ ಹಾಗೂ ಹಂಸ ಅವರನ್ನು ಕಾಯಲು ಇಟ್ಟಿದ್ದ. ಜಗದೀಶ್, ಕಿರಣ್ ಅತಿಕ್ರಮವಾಗಿ ಜಮೀನಿಗೆ ಪ್ರವೇಶಿಸಿ ಹೆಣ್ಣು ಮಕ್ಕಳನ್ನು ಶೆಡ್ನಿಂದ ಹೊರಕ್ಕೆ ಹಾಕಿದ್ದರು. ಆರೋಪಿ ಜಗದೀಶ್ ಕರೆ ಮಾಡಿ ಸ್ವತ್ತನ್ನು ತನ್ನ ಹೆಸರಿಗೆ ಜಿಪಿಎ ಮಾಡಿಸಿಕೊಡಬೇಕು. ಇಲ್ಲದಿದ್ದರೆ ಜೀವಸಹಿತ ಬಿಡುವುದಿಲ್ಲ ಎಂದು ಮಗನಿಗೆ ಬೆದರಿಕೆ ಹಾಕಿದ್ದ. ಜೀವಕ್ಕೆ ಅಪಾಯವಿದೆ ಎಂದು ಹೇಳಿ ಜಗದೀಶ್ ಅಲಿಯಾಸ್ ಜಗ್ಗ, ಕಿರಣ್, ಶಾಸಕ ಬೈರತಿ ಬಸವರಾಜ್ ವಿರುದ್ಧ ನನ್ನ ಮಗ ಪೊಲೀಸರಿಗೆ ದೂರು ನೀಡಿದ್ದರು ಎಂದು ವಿಜಯಲಕ್ಷ್ಮಿ ದೂರಿನಲ್ಲಿ ಹೇಳಿದ್ದರು.

‘ಕೃತ್ಯ ನಡೆದ ದಿನ ರಾತ್ರಿ 8 ಗಂಟೆಯ ಸುಮಾರಿಗೆ ಪುತ್ರ ಮನೆಯಿಂದ ಹೊರಗೆ ಹೋಗಿದ್ದ. ಆಗ, ಮನೆಯ ಹೊರಗಡೆ ಯಾರೊ ಕೂಗಾಡುವ ಶಬ್ದ ಕೇಳಿಸಿತ್ತು. ಜಾಗದ ವಿಚಾರಕ್ಕೆ ಜಗದೀಶ್, ಕಿರಣ್, ವಿಮಲ್, ಅನಿಲ್ ಮತ್ತು ಇತರರು ಬೈರತಿ ಬಸವರಾಜ ಅವರ ಕುಮ್ಮಕಿನಿಂದ ಕೊಲೆ ಮಾಡಿದ್ದಾರೆ’ ಎಂದು ಎಫ್ಐಆರ್ನಲ್ಲಿ ವಿವರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.