ಬೆಂಗಳೂರು: ಬೈಯಪ್ಪನಹಳ್ಳಿ ರೈಲ್ವೆ ಟರ್ಮಿನಲ್ಗೆ ನಾಲ್ಕು ಕಡೆಗಳಿಂದ ಪ್ರವೇಶ ಕಲ್ಪಿಸಲು ಅನುವಾಗುವಂತೆ ಎಲಿವೇಟೆಡ್ ರೋಟರಿ (ಮೇಲ್ಸೇತುವೆ) ನಿರ್ಮಿಸಲು ₹345 ಕೋಟಿ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಮನವಿ ಮಾಡಿದೆ.

ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ ನಿರ್ಮಾಣವಾಗಿರುವ ಟರ್ಮಿನಲ್ಗೆ ಸೂಕ್ತವಾದ ಸಂಪರ್ಕ ಮಾರ್ಗಗಳಿಲ್ಲ. ಆದ್ದರಿಂದ ನಗರದಲ್ಲಿ ಪ್ರಥಮವಾಗುವ ಈ ಯೋಜನೆಯನ್ನು ವಿನ್ಯಾಸ, ನಿರ್ಮಾಣ, ನಿರ್ವಹಣೆ, ವರ್ಗಾವಣೆ (ಡಿಬಿಒಟಿ) ಮಾದರಿಯಲ್ಲಿ ನಿರ್ಮಿಸಲು ಅನುದಾನ ನೀಡಲು ನಗರಾಭಿವೃದ್ಧಿ ಇಲಾಖೆಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪತ್ರ ಬರೆದಿದ್ದಾರೆ.

ಮಾರುತಿಸೇವಾನಗರ, ಬಾಣಸವಾಡಿ, ಕಮ್ಮನಹಳ್ಳಿ ಮತ್ತು ಬೈಯಪ್ಪನಹಳ್ಳಿಯನ್ನು ಈ ಮೇಲ್ಸೇತುವೆ ಸಂಪರ್ಕಿಸಲಿದೆ. ರೈಲ್ವೆ ಮೇಲ್ಸೇತುವೆ ಇಲ್ಲಿದ್ದು, ಇದನ್ನು ನೆಲಸಮಗೊಳಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಭೂಸ್ವಾಧೀನಕ್ಕೆ ಪ್ರತ್ಯೇಕವಾಗಿ ₹68 ಕೋಟಿ ಅಂದಾಜು ಮಾಡಲಾಗಿದೆ. ಎಲಿವೇಟೆಡ್ ಕಾರಿಡಾರ್ ನಿರ್ಮಿಸಲು ನೈರುತ್ಯ ರೈಲ್ವೆ ಮತ್ತು ಸಬ್ಅರ್ಬನ್ ರೈಲ್ವೆ ಪ್ರಾಧಿಕಾರ (ಕೆ–ರೈಡ್) ನಿರಾಕ್ಷೇಪಣಾ ಪತ್ರ ನೀಡಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.